×
Ad

ಮರ್ಕಜ್-ಅಸ್ಸುನ್ನ ಅಹ್ಲೆ ಹದೀಸ್ ಸಂಘಟನೆಯಿಂದ ಸಾಮುದಾಯಿಕ ಐಕ್ಯತೆ ಸಮಾರಂಭ

Update: 2017-03-30 17:53 IST

ಭಟ್ಕಳ,ಮಾ.30:  ಮರ್ಕಜ್-ಅಸ್ಸುನ್ನ ಅಹ್ಲೆ ಹದೀಸ್ ಸಂಘಟನೆ ಹಾಗೂ ಉತ್ತರಕನ್ನಡ ಜಿಲ್ಲಾ ಜಮಿಯತ್ ಅಹ್ಲೆ ಹದೀಸ್ ನ ಸಹಭಾಗಿತ್ವದೊಂದಿಗೆ ಬಂದರ್ ರಸ್ತೆಯಲ್ಲಿನ ಕಮಲಾವತಿ ಶಾನುಭಾಗ ಸಭಾಭವನದಲ್ಲಿ ಮುಸ್ಲಿಮರಲ್ಲಿ ಐಕ್ಯತೆ ಕುರಿತಂತೆ ಬೃಹತ್ ಸಮಾವೇಶ ಜರಗಿತು.

ಸಮಾವೇಶದಲ್ಲಿ ನಾಡಿನ ಖ್ಯಾತ ವಿದ್ವಾಂಸರು ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದ ಶೇಖ್ ಅಬ್ದುಲ್ ಗಫೂರ್, ದೇವನೊಂದಿಗೆ ಮತ್ತೊಬನ ಸಹಭಾಗಿತ್ವ ಸಲ್ಲದು, ತೌಹೀದ್ ನ ಮೇಲೆ ನಮ್ಮ ವಿಶ್ವಾಸ ಗಟ್ಟಿಗೊಳಿಸಬೇಕಾಗಿದ್ದು ಶಿರ್ಕ್ ನಿಂದ ತಡೆಯುವುದರೊಂದಿಗೆ ಕೆಟ್ಟ ಕರ್ಮಗಳಿಂದ ತಡೆದು ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಕರೆ ನೀಡಿದರು.

 ಸಮಾವೇಶದಲ್ಲಿ ಶೇಖ್ ಅಬ್ದುಲ್ ಕಾದಿರ್ ಜಾಮಿಅ, ಮುಂಬೈಯ ಜಮಿಯತ್ ಅಹ್ಲೆ ಹದೀಸ್ ಅಮೀರ್ ಶೇಖ್ ಅಬ್ದುಸ್ಸಲಾಮ್ ಸಲಫಿ, ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಮರ್ಕಝಿ ಅಹ್ಲೆ ಹದೀಸ್ ಹಿಂದ್ ಶೇಖ್ ಮುಖೀಮ್ ಫೈಝಿ, ಶೇಖ್ ಅಸ್ಲಮ್ ಖಾನ್ ಮತ್ತಿತರು ಸಮಾವೇಶದಲ್ಲಿ ಮಾತನಾಡಿದರು. ಶೇಖ್ ಅನೀಸುರ್ರಹ್ಮಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News