ಅರ್ಥಶಾಸ್ತ್ರ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮ
Update: 2017-03-30 19:36 IST
ಮಂಗಳೂರು, ಮಾ.30: ಆರ್ಥಿಕ ಅಭಿವೃಧ್ಧಿಯ ಧಾವಂತದಲ್ಲಿ ಪರಿಸರಕ್ಕೆ ಉಂಟಾಗುತ್ತಿರುವ ಹಾನಿಯನ್ನು ಕಡೆಗಣಿಸಿದರೆ ಮುಂದೆ ಅತ್ಯಂತ ದಾರುಣ ದಿನಗಳನ್ನು ಎದುರಿಸಬೇಕಾದೀತು ಹಾಗೂ ನೆಲ, ಜಲ, ಗಾಳಿಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪ್ರೊ. ರಾಜಮಣಿ ರಾಮಕುಂಜ ಅಭಿಪ್ರಾಯಪಟ್ಟರು.
ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವರಾಮ್ ಪರಿಸರ ಮಾಲಿನ್ಯದ ಮಾರಕಗಳನ್ನು ವಿವರಿಸಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಪುರುಷೋತ್ತಮ ಭಟ್ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಭವ್ಯಾಶ್ರೀ ಉಪಸ್ಥಿತರಿದ್ದರು.