ರೋವರ್ಸ್-ರೇಂಜರ್ಸ್ ಚಾರಣ ಶಿಬಿರ
Update: 2017-03-30 19:37 IST
ಮಂಗಳೂರು, ಮಾ.30: ನಗರದ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್ಸ್-ರೇಂಜರ್ಸ್ ಘಟಕದ ವಿಚಾರಣ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ನರಹರಿಬೆಟ್ಟ ಮತ್ತು ಬೆಳ್ತಂಗಡಿ ತಾಲೂಕಿನ ಶಿಶಿಲಕ್ಕೆ ಏರ್ಪಡಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ‘ಪ್ರಕೃತಿ ಅಧ್ಯಯನ ಹಾಗೂ ಪ್ರಕೃತಿಯೊಂದಿಗೆ ಸಹಬಾಳ್ವೆ ಸ್ಕೌಟಿಂಗ್‌ನ ಮೂಲ ತತ್ವವಾಗಿದೆ. ನೆಲ, ಜಲ, ಅರಣ್ಯ ಹಾಗೂ ಮಣ್ಣಿನ ಸೊಗಡನ್ನು ಅರಿತು ಅದರೊಂದಿಗೆ ಸಹಬಾಳ್ವೆ ನಡಿಸಿದಾಗ ಬದುಕು ಅರ್ಥಪೂರ್ಣವಾಗುವುದು ಎಂದು ತಿಳಿಸಿದರು. ಪ್ರೊ. ರವಿಕುಮಾರ್, ಡಾ. ಶರ್ಮಿಳಾ ರೈ ಉಪಸ್ಥಿತರಿದ್ದರು. ರೋವರ್ ಘಟಕದ ಸಂಚಾಲಕ ಪ್ರೊ. ಪುರುಷೋತ್ತಮ ಭಟ್ ಎನ್. ಚಾರಣದ ನಾಯಕತ್ವ ವಹಿಸಿದ್ದರು. ಚಾರಣ ಸ್ಥಳದಲ್ಲಿ ಘಟಕದ ವಿದ್ಯಾರ್ಥಿಗಳಿಗಾಗಿ ಸ್ಕೌಟಿಂಗ್ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಉಪನ್ಯಾಸಕಿ ಶಿಲ್ಪಾ, ಉಷಾ, ದಿವ್ಯಾ, ಪ್ರೊ. ಧೀರಜ್ ಚಾರಣದಲ್ಲಿ ಭಾಗವಹಿಸಿ ಸಹಕರಿಸಿದರು.