ಭಟ್ಕಳ: ಎಸ್.ಎಸ್.ಎಲ್.ಸಿ.ಪರೀಕ್ಷೆ - 35 ವಿದ್ಯಾರ್ಥಿಗಳು ಗೈರು
ಭಟ್ಕಳ,ಮಾ.30: 2016-17ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಗುರುವಾರದಿಂದ ರಾಜ್ಯಾದ್ಯಂತ ಆರಂಭವಾಗಿದ್ದು ಭಟ್ಕಳ ತಾಲೂಕಿನಲ್ಲಿ ಪ್ರಥಮ ಭಾಷೆ ಪರೀಕ್ಷೆಗೆ 35 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಪಟಗಾರ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮತನಾಡಿದ ಅವರು ಭಟ್ಕಳ ತಾಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ 2244 ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೊಂದಾಣಿಯಾಗಿದ್ದು ಪ್ರಥಮ ಭಾಷೆಗೆ 2175 ವಿದ್ಯಾರ್ಥಿಗಳು ನೊಂದಾಯಿಸಲ್ಪಟ್ಟಿದ್ದರು ಆದರೆ 2140 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಹೇಳಿದರು.
ಬಾಲಕೀಯರ ಸಂಖ್ಯೆ ಹೆಚ್ಚು: ತಾಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ 1078 ಬಾಲಕರು, 1168 ಬಾಲಕೀಯರು ಪರೀಕ್ಷೆಗಾಗಿ ನೊಂದಣೀ ಮಾಡಿಕೊಂಡಿದ್ದು ಈ ಬಾರಿಯೂ ಬಾಲಕೀಯರದ್ದೆ ಮೇಲುಗೈ ಎಂದ ಅವರು, ಇಂದಿನ ಪರೀಕ್ಷೆಯು ಸುಸೂತ್ರವಾಗಿ ನಡೆದಿದ್ದು ಯಾವುದೇ ನಕಲು, ಮಾಲ್ ಪ್ರಾಕ್ಟಿಸ್ ನಡೆಯದೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಿದ್ದಾರೆ ಎಂದರು. ಪರೀಕ್ಷೆಗೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 8ಮುಖ್ಯ ಅಧೀಕ್ಷಕರು, 8 ಪ್ರಶ್ನೆ ಪತ್ರಿಕೆ ಪಾಲಕರು, 8 ಸಿಟಿಂಗ್ ಸ್ಕ್ವಾಡ್, 8 ತಾಲೂಕಾ ವೀಕ್ಷಕರು ಹಾಗೂ ತಹಸಿಲ್ದಾರ್, ಎ.ಸಿ, ಮತ್ತು ಸಿ.ಇಓ ಒಳಗೊಂಡ ಮೂರು ವಿಶೇಷ ಸ್ಕ್ವಾಡ್ ನ್ನು ರಚಿಸಲಾಗಿದ್ದು ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟಲು ಎಲ್ಲ ರೀತಿಯಿಂದಲೂ ಸಿದ್ದತೆ ಮಾಡಲಾಗಿದ್ದು. ಪ್ರತಿ ಕೇಂದ್ರಕ್ಕೆ ಹ್ಯಾಂಡಿ ಕ್ಯಾಮರಾ ವ್ಯವಸ್ಥೆ ಮಾಡಿಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಇ.ಓ ಕಾರ್ಯಲಯದ ಸಂಯೋಜಕರಾದ ಎಸ್.ಪಿ.ಭಟ್ ಉಪಸ್ಥಿತರಿದ್ದರು.