ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಕಾರ್ಯಾನುಷ್ಠಾನ ಮಂಡಳಿಗೆ ನೇಮಕ
Update: 2017-03-30 20:41 IST
ಭಟ್ಕಳ,ಮಾ.30: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳುರು, ಇದರ ಕಾರ್ಯಾನುಷ್ಠಾನ ಮಂಡಳಿಯನ್ನು ಪುನರ್ ರಚನೆ ಮಾಡಲಾಗಿದ್ದು ಭಟ್ಕಳದ ಹಿರಿಯ ಸಾಹಿತಿ ಅಂಜುಮನ್ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್‌ರನ್ನು ಅಧಿಕಾರೇತರ ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಿಂದ ಏಳು ಮಂದಿ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು ಕಲಬುರಗಿ ಜಿಲ್ಲೆಯ ಡಾ.ಚಂದ್ರಕಲಾ ಬಿದರಿ, ಉಡುಪಿ ಜಿಲ್ಲೆಯ ಡಾ.ನಿಕೇತನ, ಉತ್ತರಕನ್ನಡ ಜಿಲ್ಲೆಯ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್, ಮೈಸೂರು ಜಿಲ್ಲೆಯ ಡಾ.ಗಣೇಶ ಚಿಕ್ಕಮಗಳೂರು, ದಾವಣಗೇರೆ ಜಿಲ್ಲೆಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಹಾಗೂ ಬೆಂಗಳೂರು ಜಿಲ್ಲೆಯ ಕಾ.ತ.ಚಿಕ್ಕಣ್ಣ ಸೇರಿದ್ದಾರೆ.