ಪೆಟ್ರೋಲ್ ಬದಲು ಡೀಸೆಲ್ : ಕಂಪೆನಿಗೆ ವಿಲಾಸಿ ಕಾರು ಮರಳಿಸಿದ ಮೊಯ್ದಿನ್ ಬಾವಾ
ಮಂಗಳೂರು, ಮಾ. 30: ಪೆಟ್ರೋಲ್ ಬಂಕ್‌ನ ಸಿಬ್ಬಂದಿಯ ಅಚಾತುರ್ಯರಿಂದ ಪೆಟ್ರೋಲ್ ಬದಲು ಡೀಸೆಲ್ ಹಾಕಿಸಲ್ಪಟ್ಟ ಶಾಸಕ ಮೊಯ್ದಿನ್ ಬಾವರ ಪುತ್ರನಿಗೆ ಸೇರಿದ ವಿಲಾಸಿ ಕಾರನ್ನು ಕಂಪೆನಿಗೆ ಮರಳಿಸಿದ್ದಾರೆ.
ತೈಲ ಹಾಕುವ ಕಡೆ ಪೆಟ್ರೋಲ್ ಅಥವಾ ಡೀಸೆಲ್ ಎಂದು ಉಲ್ಲೇಖಿಸದಿದ್ದುದು ಕಂಪೆನಿಯ ತಪ್ಪು. ಪೆಟ್ರೋಲ್ ಬಂಕ್‌ನ ಸಿಬ್ಬಂದಿಯ ಅಚಾತುರ್ಯದಿಂದ ಪೆಟ್ರೋಲ್ ಬದಲು ಡೀಸೆಲ್ ಹಾಕಲಾಗಿದೆ. ಈ ಬಗ್ಗೆ ಪೆಟ್ರೋಲ್ ಬಂಕ್‌ನ ಮಾಲಕರು ಕ್ಷಮೆ ಕೋರಿದ್ದಾರೆ. ಕಾರಿನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಬಗ್ಗೆ ಉಲ್ಲೇಖಿಸದಿದ್ದುದು ಕಂಪೆನಿಯ ತಪ್ಪು. ಹಾಗಾಗಿ ತನ್ನ ಪುತ್ರನಿಗೆ ಖರೀದಿಸಿದ ವಿಲಾಸಿ ಕಾರನ್ನು ಕಂಪೆನಿಗೆ ಮರಳಿಸಿದ್ದೇನೆ. ಕಂಪೆನಿಯು ತಮನಗೆ ಹೊಸ ಕಾರು ನೀಡುವ ವಿಶ್ವಾಸವಿದೆ ಎಂದು ಮೊಯ್ದಿನ್ ಬಾವಾ ತಿಳಿಸಿದ್ದಾರೆ.
ಶಾಸಕ ಮೊಯ್ದಿನ್ ಬಾವಾ ಪೆಟ್ರೋಲ್ ಹಾಗೂ ಬ್ಯಾಟರಿ ಚಾಲಿತ ವೋಲ್ವೊ ಎಕ್ಸೆಲೆಂಟ್ ಹೈಬ್ರಿಡ್ ಕಾರನ್ನು ಇತ್ತೀಚೆಗೆ ಪುತ್ರನಿಗಾಗಿ ಖರೀದಿಸಿ ಗಮನ ಸೆಳೆದಿದ್ದರು. 1.65 ಕೋ.ರೂ. ಮೊತ್ತದ ಈ ಹೈಬ್ರಿಡ್ ಕಾರು ಭಾರತದಲ್ಲಿ ಪ್ರಥಮ ಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಮೊದಿನ್ ಬಾವ ಇದರ ಪ್ರಥಮ ಗ್ರಾಹಕರಾಗಿದ್ದಾರೆ.