ಎ. 15ರಂದು ಬಂಟ್ವಾಳ ಉರೂಸ್ ಕಾರ್ಯಕ್ರಮ

Update: 2017-03-30 17:27 GMT

ಬಂಟ್ವಾಳ, ಮಾ. 30: ಕೆಳಗಿನಪೇಟೆಯ ಸೈಯದ್ ಮಸ್ತಾನ್ ಕೋಯ ತಂಙಳ್ ಮತ್ತು ಸೆಯ್ಯಿದತ್ ಸಖಾಫಿಯಾ ಬೀಬಿರವರ ಹೆಸರಲ್ಲಿ ಆಚರಿಸಿಕೊಂಡು ಬರುತ್ತಿರುವ ’ಬಂಟ್ವಾಳ ಮುಖಾಂ ಉರೂಸ್ ಮತ್ತು ನೇರ್ಚೆ’ ಕಾರ್ಯಕ್ರಮ ಎಪ್ರಿಲ್ 12ರಿಂದ 15ರವರೆಗೆ ಬಂಟ್ವಾಳ ಕೆಳಗಿನಪೇಟೆಯ ಯಹ್ಯಾ ನಗರದ ಶಂಸುಲ್ ಉಲೆಮಾ ವೇದಿಕೆಯಲ್ಲಿ ನಡೆಯಲಿದೆ.

ಎ. 12ರಂದು ಇಶಾ ನಮಾರ್ನ ಬಳಿಕ ಕಾರ್ಯಕ್ರಮವನ್ನು ಸಮಸ್ತ ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಮಲಪ್ಪುರಂ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಮಸೈಯದ್ ಫಕ್ರುದ್ದೀನ್ ಹಸನಿ ತಂಙಳ್ ತಾಣೂರು ದುಅ ನೆರವೇರಿಸಲಿದ್ದಾರೆ. ಖ್ಯಾತ ಕುರ್‌ಆನ್ ಪಂಡಿತ ರಹ್ಮತುಲ್ಲಾ ಖಾಸಿಮಿ ಮುತ್ತೇಡಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಎ. 23ರಂದು ದೇರಳಕಟ್ಟೆ ಮುದರ್ರಿಸ್ ಅಶ್ರಫ್ ರಹ್ಮಾನಿ ಚೌಕಿ, ಎ. 24ರಂದು ಕೇರಳ ಕಣ್ಣೂರಿನ ಅಲಿ ಅಕ್ಬರ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಎ. 24ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಸಮಸ್ತ ಪ್ರ.ಕಾರ್ಯದರ್ಶಿ ಆಲಿ ಕುಟ್ಟಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿರುವರು.ಸೂಫಿವರ್ಯರಾದ ಅತ್ತಿಪಟ್ಟ ಉಸ್ತಾದ್ ದುವಾ ನೆರವೇರಿಸಲಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಉಪಾಧ್ಯಕ್ಷ ಓಣಂಪಿಳ್ಳಿ ಮುಹಮ್ಮದ್ ಫೈಝಿ ಮುಖ್ಯ ಪ್ರಭಾಷಣ ಗೈಯಲಿರುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭಾ ಸದಸ್ಯ ಮುನೀಶ್ ಅಲಿ ಸಹಿತ ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿರುವರು. ರಾತ್ರಿ 11 ಗಂಟೆಯ ಬಳಿಕ ಅನ್ನ ಸಂತರ್ಪನೆ ಇದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News