ಎಸ್ಸೆಸೆಲ್ಸಿ ಪರೀಕ್ಷೆ : ಬಂಟ್ವಾಳ ತಾಲೂಕಿನಲ್ಲಿ 55 ಮಂದಿ ವಿದ್ಯಾರ್ಥಿಗಳು ಗೈರು

Update: 2017-03-30 17:29 GMT

ಬಂಟ್ವಾಳ, ಮಾ. 30: ರಾಜ್ಯಾದ್ಯಂತ 2016-17ನೆ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಗುರುವಾರ ಆರಂಭಗೊಂಡಿದ್ದು ಮೊದಲ ದಿನದ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 55 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳಿದ್ದು ವಾಮದಪದವು ಮತ್ತು ವಗ್ಗ ಸ.ಪ.ಪೂ.ಕಾಲೇಜುಗಳಲ್ಲಿ 2 ಸ್ವತಂತ್ರ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು 14 ಕ್ಲಸ್ಟರ್ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ವಿಧಗಳಲ್ಲಿ ಒಟ್ಟು 5,579 ಪರೀಕ್ಷಾರ್ಥಿ ವಿದ್ಯಾರ್ಥಿಗಳಿದ್ದು ಅವರಲ್ಲಿ 5,524 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ನೊಂದಾಯಿತ ಪರೀಕ್ಷಾರ್ಥಿ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಥಮ ಭಾಷಾ ವಿಷಯದಲ್ಲಿ 2,428 ಹುಡುಗರಲ್ಲಿ 33 ಮಂದಿ ಮತ್ತು 2,587 ಹುಡುಗಿಯರಲ್ಲಿ 18 ಮಂದಿ ಗೈರು ಹಾಜರಾಗಿದ್ದಾರೆ. ಇಂಗ್ಲಿಷ್ ಪ್ರಥಮ ಭಾಷಾ ವಿಷಯದಲ್ಲಿ 193 ಹುಡುಗರಲ್ಲಿ 3 ಮಂದಿ ಗೈರು ಹಾಜರಾಗಿದ್ದಾರೆ. ಸಂಸ್ಕೃತ ಪ್ರಥಮ ಭಾಷೆಯಲ್ಲಿ ಓರ್ವ ಗೈರುಹಾಜರಾಗಿದ್ದಾನೆ.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಗಸೂಚಿಯಂತೆ ಮೇಲ್ವಿಚಾರಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ತಂಡ ಕಾರ್ಯನಿರ್ವಹಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದೆ ವಿದ್ಯಾರ್ಥಿಗಳು ನಿರಾಳವಾಗಿ ಪರೀಕ್ಷೆಯನ್ನೆದುರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News