ಕೋಟೆಕಾರು ಪಟ್ಟಣ ಪಂಚಾಯತ್ 2017-18 ನೇ ಸಾಲಿನ ಬಜೆಟ್ ಮಂಡನೆ

Update: 2017-03-30 17:31 GMT

ಉಳ್ಳಾಲ,ಮಾ.30: ಕೋಟೆಕಾರು ಪಟ್ಟಣ ಪಂಚಾಯತ್ ಆದ ನಂತರದ ಪ್ರಥಮ 2017-18 ನೇ ಸಾಲಿನ ಬಜೆಟ್ ಸಭೆ ಗುರುವಾರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಲ್ಲಿ ನಡೆಯಿತು. ಒಟ್ಟು ಆದಾಯ 10.59 ಕೋಟಿ ಅನುದಾನದಡಿ ಲೆಕ್ಕಾಚಾರದಲ್ಲಿ ನಡೆದ ಬಜೆಟಿನಲ್ಲಿ 10.48 ಲಕ್ಷ ಖರ್ಚು ಅಂದಾಜಿಸಲಾಗಿದ್ದು ಮತ್ತು 10.60 ಲಕ್ಷ ಮಿಗತೆ ಬಜೆಟ್ ಮಂಡಿಸಲಾಯಿತು.

ನೀರು ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುವ ಕುರಿತು ಚರ್ಚಿಸಲಾಯಿತು.

ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಯಲ್ಲಿ ರೂ. 1.60 ಲಕ್ಷ ಅಂದಾಜಿಸಿಲಾಗಿದೆ. ನೀರಿನ ಬಿಲ್ ಪಾವತಿಯಲ್ಲಿ ರೂ. 28 ಲಕ್ಷ, ನೀರಿನ ಅಭಾವ ಅನುದಾನದಡಿ ರೂ. 40 ಲಕ್ಷ, ವಿಪತ್ತು ನಿರ್ವಹಣಾ ಅನುದಾನದಡಿ ಜಿಲ್ಲಾಧಿಕಾರಿಯಿಂದ ರೂ. 20 ಲಕ್ಷ, ಪಟ್ಟಣ ಪಂಚಾಯಿತಿನ ರೂ. 30 ಲಕ್ಷ, ಕಟ್ಟಡ ಪರವಾನಿಗೆ ಮತ್ತು ಅಭಿವೃದ್ಧಿ ಶುಲ್ಕ ರೂ. 53 ಲಕ್ಷ , ಉದ್ದಿಮೆ ಪರವಾನಿಗೆಯಿಂದ ರೂ. 5 ಲಕ್ಷ , ಜಾಹೀರಾತು ಶುಲ್ಕ ರೂ. 25,000, ಘನತ್ಯಾಜ್ಯ ವಿಲೇವಾರಿ ಶುಲ್ಕ ರೂ. 11 ಲಕ್ಷ , ಉಪಕರಣಗಳ ಸಂಗ್ರಹಣೆ, ದಂಡ ವಸೂಲಿ ರೂ. 8.5 ಲಕ್ಷ , ಘನ ತ್ಯಾಜ್ಯ ಸಂಸ್ಕರಣಾ ಘಟಕದ ಕಂಪೌಂಡ್ ರೂ. 45 ಲಕ್ಷ ಒಟ್ಟು 2 ಕೋಟಿ 60 ಲಕ್ಷ ಅಂದಾಜಿಸಲಾಗಿದೆ.

ಸಭೆಯಲ್ಲಿ ಮಂಡಿಸಲಾದ ಕ್ರಿಯಾ ಯೋಜನೆಗಳು : 20 ಲಕ್ಷ ವೆಚ್ಚದಲ್ಲಿ ಪುಳಿತ್ತಡಿ ಎಂಬಲ್ಲಿ ತೆರೆದ ಬಾವಿ ನಿರ್ಮಾಣ, , ಮಾಡೂರು ಸ್ಮಶಾನ ಬಳಿ 1 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಹಾಗೂ ಕೊಳವೆ ಜಾಲ ಅಳವಡಿಕೆ, 25 ಲಕ್ಷ ರೂ ವೆಚ್ಚದಲ್ಲಿ ಪನೀರು ಸೈಟಿನಲ್ಲಿ ತೆರೆದಬಾವಿ ಹಾಗೂ2.50 ಲಕ್ಷ ಲೀ. ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ , ಮಾಡೂರು ದ್ವಾರದಿಂದ ಮಿತ್ರನಗರದವರೆಗೆ ರಸ್ತೆಗೆ ರೂ. 50 ಲಕ್ಷ ವೆಚ್ಚದಲ್ಲಿ ಫೇವರ್ ಫಿನಿಶ್ ಡಾಮರೀಕರಣ, ರೂ. 15 ಲಕ್ಷ ವಚ್ಚದಲ್ಲಿ ವಿಷ್ಣುಮೂರ್ತಿ ದೇವಸ್ಥಾನದಿಂದ ಬೆನಕ ಜನರಲ್ ಸ್ಟೋರಿನವರೆಗೆ ರಸ್ತೆ ಕಾಂಕ್ರೀಟಿಕರಣ, ರೂ. 15 ಲಕ್ಷ ವೆಚ್ಚದಲ್ಲಿ ಶಿವಾಜಿ ನಗರದಿಂದ ಶಾಂತಿಬಾಗ್ ರಸ್ತೆ ಅಭಿವೃದ್ಧಿ, ನಡಾರ್ ಎಂಬಲ್ಲಿ 13.23 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ರೂ. 26.58 ಲಕ್ಷ ವೆಚ್ಚದಲ್ಲಿ ಪನೀರು ರಸ್ತೆಯ ಕೋಮರಂಗಳ ಎಂಬಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ, ರೂ. 20 ಲಕ್ಷ ವೆಚ್ಚದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರುಕಟ್ಟೆ ನಿರ್ಮಾಣ, 15.67 ಲಕ್ಷ ವೆಚ್ಚದಲ್ಲಿ ಪಾಕ್‌ರ್  ನಿರ್ಮಾಣ, ರೂ. 10 ಲಕ್ಷ ವೆಚ್ಚದಲ್ಲಿ ವಿವಿದೆಡೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ, ರೂ. 7.50 ಲಕ್ಷ ವೆಚ್ಚದಲ್ಲಿ 10 ಕಡೆಗಳಲ್ಲಿ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರಚಿಸಲಾಯಿತು.

 ಮುಖ್ಯಾಧಿಕಾರಿ ಪೂರ್ಣಕಲಾ, ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು, ಉಪಾಧ್ಯಕ್ಷ ಅನಿಲ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾರತೀ ರಾಘವ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News