ಎ.3ರಿಂದ ಟೈಲರಿಂಗ್ ಸರ್ಟಿಫಿಕೇಟ್ ಕೋರ್ಸ್

Update: 2017-03-30 17:58 GMT

ಮಂಗಳೂರು, ಮಾ. 30: ಮಹಿಳೆಯರಿಗೆ ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಲ್ಪ್ ಇಂಡಿಯಾ ಫೌಂಡೇಶನ್ ತೊಕ್ಕೊಟ್ಟು ಘಟಕದ ವತಿಯಿಂದ ಹೊಲಿಗೆ ತರಬೇತಿ ಆಧಾರಿತ ಟೈಲರಿಂಗ್ ಸರ್ಟಿಫಿಕೇಟ್ ಕೋರ್ಸ್ ಎ.3ರಿಂದ ಆರಂಭಗೊಳ್ಳಲಿದೆ ಎಂದು ಫೌಂಡೇಶನ್‌ನ ಪ್ರಕಟನೆ ತಿಳಿಸಿದೆ.

ಕ್ರಾಫ್ಟ್, ಟೈಲರಿಂಗ್, ಎಂಬ್ರಾಯ್‌ಡರಿಂಗ್, ಮಶಿನ್ ಎಂಬ್ರಾಯ್‌ಡರಿ, ಫ್ಯಾಬ್ರಿಕ್ ಪೈಂಟಿಂಗ್, ನಿಟ್ಟಿಂಗ್, ಡಾಲ್ ಮೇಕಿಂಗ್ ಮೊದಲಾದ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನ್ ಕೋರ್ಸ್‌ಗಳು ನೀಡಲಾಗುತ್ತದೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಪ್ರತಿದಿನ 3 ಬ್ಯಾಚ್‌ಗಳು ನಡೆಯಲಿವೆ. ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ವಯಸ್ಸು ಅಥವಾ ವಿದ್ಯಾರ್ಹತೆಯ ಅಗತ್ಯವಿಲ್ಲ. ಕೋರ್ಸ್ ಪೂರ್ಣಗೊಳಿಸುವವರಿಗೆ ‘ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಮಿತಿಐಯ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News