ರಷ್ಯಾ ಸಂಚಿನ ಬಗ್ಗೆ ಸಾಕ್ಷ್ಯ ಹೇಳಲು ಟ್ರಂಪ್ ಮಾಜಿ ರಕ್ಷಣಾ ಸಲಹೆಗಾರ ಫ್ಲಿನ್ ಸಿದ್ಧ

Update: 2017-03-31 03:41 GMT

ವಾಷಿಂಗ್ಟನ್, ಮಾ.31: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮೇಲೆ ಪ್ರಭಾವ ಬೀರಲು ರಷ್ಯಾ ಸಂಚು ಹೂಡಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿ ಟ್ರಂಪ್ ವಿರುದ್ಧ ಸಾಕ್ಷ್ಯ ಹೇಳಲು ಸಿದ್ಧ ಎಂದು ಟ್ರಂಪ್ ತಂಡದಿಂದ ವಜಾಗೊಂಡ ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆಫ್ಟಿನೆಂಟ್ ಜನರಲ್ ಮೈಕೆಲ್ ಫ್ಲಿನ್ ಹೊಸ ಬಾಂಬ್ ಸಿಡಿಸಿದ್ದಾರೆ.

ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಶನ್ ಹಾಗೂ ಅಮೆರಿಕ ಕಾಂಗ್ರೆಸ್‌ನ ಗುಪ್ತಚರ ಸಮಿತಿ ಟ್ರಂಪ್ ಅವರ ರಷ್ಯಾ ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಇವುಗಳ ಮುಂದೆ ಸ್ವಯಂಪ್ರೇರಿತರಾಗಿ ಸಂದರ್ಶನ ನೀಡಲು ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಟ್ರಂಪ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಒಬಾಮಾ ಆಡಳಿತ ವಿಧಿಸಿದ್ದ ರಷ್ಯಾ ಮೇಲಿನ ನಿರ್ಬಂಧವನ್ನು ಕಿತ್ತುಹಾಕುವ ಸಂಬಂಧ ರಷ್ಯದ ರಾಯಭಾರಿ ಸೆರ್ಗಿ ಕಿಸ್ಲ್ಯಾಕ್ ಅವರ ಜತೆ ಸಂಪರ್ಕ ನಡೆದಿದೆ ಎಂಬ ಅಂಶದ ಬಗ್ಗೆ ಎಫ್‌ಬಿಐಗೆ ಸುಳ್ಳು ಮಾಹಿತಿ ನೀಡಿದ್ದಾಗಿ ಫ್ಲಿನ್ ಹೇಳಿದ ಬಳಿಕ ಅವರನ್ನು ವಜಾಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News