ಕಾಸರಗೋಡು: ವಾಹನ ಮುಷ್ಕರಕ್ಕೆ ಭಾರೀ ಬೆಂಬಲ

Update: 2017-03-31 10:15 GMT

ಕಾಸರಗೋಡು, ಮಾ.31: ವಿಮಾ ಮೊತ್ತ ಹೆಚ್ಚಳ  ಪ್ರತಿಭಟಿಸಿ  ನಡೆಯುತ್ತಿರುವ ವಾಹನ ಮುಷ್ಕರಕ್ಕೆ  ಕಾಸರಗೋಡು ಸೇರಿದಂತೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣವಾಗಿದ್ದು, ಖಾಸಗಿ ಬಸ್ಸು, ಲಾರಿ, ಮಿನಿ ಲಾರಿ, ಟ್ಯಾಕ್ಸಿ, ಆಟೋ ರಿಕ್ಷಾ, ಟೆಂಪೋ  ಮೊದಲಾದ ವಾಹನಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ.

ಕೆಲವೇ ಕೆಲವು ಸರಕಾರಿ ಬಸ್ಸುಗಳು ಮಾತ್ರ ಸಂಚಾರ ನಡೆಸುತ್ತಿವೆ.  ಗ್ರಾಮೀಣ ಪ್ರದೇಶಗಳಲ್ಲಿ  ಬಸ್ಸು, ವಾಹನ ಸಂಚಾರ  ಇಲ್ಲದೆ  ಪರದಾಡುವಂತಾಯಿತು .
ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಕೆಲವೊಂದು ಸರಕಾರಿ ಬಸ್ಸುಗಳು ಮಾತ್ರ  ಸಂಚರಿಸುತ್ತಿವೆ.
ಮುಷ್ಕರದ ಹಿನ್ನೆಲೆಯಲ್ಲಿ  ಹಲವು ಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಜನ ಸಂಚಾರ ವಿರಳವಾಗಿದೆ. ಇದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿಲ್ಲ.
ಹಲವು ಸಂಘಟನೆ ಕಾರ್ಯಕರ್ತರು ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News