ಮಂಗಳೂರು: ಅಗರಿ ಎಂಟರ್‌ಪ್ರೈಸಸ್‌ನಲ್ಲಿ ಲಕ್ಕಿಡ್ರಾ
ಮಂಗಳೂರು, ಮಾ.31: ಮೇರಿಹಿಲ್‌ನಲ್ಲಿರುವ ಅಗರಿ ಎಂಟರ್‌ಪ್ರೈಸಸ್‌ನ ಶಾಖೆಯಲ್ಲಿ ‘ಅಗರಿ ಹಬ್ಬಗಳ ಉತ್ಸವ ಉತ್ಸವ-2017’ರ ಲಕ್ಕಿಡ್ರಾ ಇತ್ತೀಚೆಗೆ ನಡೆಯಿತು. 10 ಅದೃಷ್ಟಶಾಲಿ ಗ್ರಾಹಕರಿಗೆ ಡ್ರಾ ಮೂಲಕ ಆರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಿರ್ಲಾ ಸನ್‌ಲೈಫ್ ಇದರ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ಬಿಪಿನ್ ಶೆಟ್ಟಿ, ಕೆ.ಎಲ್.ಕಾರ್ತಿಕ್, ಗಣೇಶ್ ಎಚ್., ಪದ್ಮನಾಭ ಸುವರ್ಣ, ಮೋಹನ್‌ದಾಸ್, ಶಿವಶಂಕರ ಮಯ್ಯ, ವಿವೇಕ್ ಪ್ರಭು, ಅನಿತ್ ಗೋವರ್ಸ್, ತುಕರಾಂ ಭಾಗವಹಿಸಿದ್ದರು.
ಲಕ್ಕಿಡ್ರಾದಲ್ಲಿ ಕೆ.ಎಲ್.ಕಾರ್ತಿಕ್‌ರವರು ಪಿಜನ್ ಕಡಾಯಿ, ಗಣೇಶ್ ಎಚ್. ಅವರು ಕೈಲಾಶ್ ಸೀಲಿಂಗ್ ಫ್ಯಾನ್, ಪದ್ಮನಾಭ ಸುವರ್ಣರಿಗೆ ಟೀನಿಕಾ ಮಿಕ್ಸಿ, ಮೋಹನ್ ದಾಸ್ ಅವರಿಗೆ ರೈಸ್‌ಪೋಟ್, ಶಿವಶಂಕರ ಮಯ್ಯರಿಗೆ ಬಜಾಜ್ ಗ್ಯಾಸ್ ಸ್ಟವ್, ವಿವೇಕ್ ಪ್ರಭು ಅವರಿಗೆ ಸಂತ ಕುಕ್‌ಟಾಪ್, ಅನಿತ್ ಗೋವರ್ಸ್ ಅವರಿಗೆ ಕೆನ್‌ಸ್ಟರ್ ಟೋಸ್ಟರ್, ತುಕರಾಮ ಅವರಿಗೆ ಗ್ಲಾಸ್ ಟೀಪಾಯಿ ಹಾಗೂ ರೈಸ್‌ಪೋಟ್ ವಿಜೇತರಾದರು.
ವಿಜೇತರಿಗೆ ಅಗರಿ ಎಂಟರ್‌ಪ್ರೈಸಸ್ ಮಾಲಕ ಅಗರಿ ಶ್ರೀ ರಾಘವೇಂದ್ರ ರಾವ್ ಬಹುಮಾನಗಳನ್ನು ವಿತರಿಸಿದರು.