×
Ad

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಣ್ಣ ವ್ಯಾಪಾರಸ್ಥರಿಗೆ ತಳ್ಳುಗಾಡಿ ವಿತರಣೆಗೆ ಅರ್ಜಿ ಆಹ್ವಾನ

Update: 2017-03-31 20:06 IST

ಮಂಗಳೂರು, ಮಾ.31: ಸಣ್ಣ ವ್ಯಾಪಾರಸ್ತರಿಗೆ ತಳ್ಳುಗಾಡಿ ನೀಡಲು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ವತಿಯಿಂದ ಅರ್ಜಿ ಅಹ್ವಾನಿಸಲಾಗಿದೆ.

ಆಮ್ಲೆಟ್, ಚರುಮುರಿ, ಮಸಾಲ ಪುರಿ, ಬೋಂಡ, ಚಹಾ, ಎಳನೀರು, ತರಕಾರಿ, ಹಣ್ಣುಹಂಪಲು, ಬಟ್ಟೆ ಬರೆಗಳು, ಮೊಬೈಲ್, ಬೆಲ್ಟ್, ವಾಚ್, ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ಟಿಕ್ ಇತ್ಯಾದಿಗಳನ್ನು ವ್ಯಾಪಾರ ಮಾಡಲು ಬಯಸುವ ಸಣ್ಣ ವ್ಯಾಪಾರಸ್ಥರಿಗೆ ತಳುವ್ಳಗಾಡಿಯನ್ನು ಬಡ್ಡಿರಹಿತ ಸಾಲದ ರೂಪದಲ್ಲಿ ನೀಡಲಾಗುವುದು. ಸಾಲದ ಮೊತ್ತದಲ್ಲಿ ಸಬ್ಸಿಡಿ ಇದ್ದು, ಸಾಲ ಮರುಪಾವತಿಸಲು ಸುಲಭ ಕಂತುಗಳು ಲಭ್ಯ. ಆರ್ಥಿಕವಾಗಿ ಹಿಂದುಳಿದ ನಿರುದ್ಯೋಗಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05.04.2017 ಆಗಿದ್ದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ), ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2 ದೂ: 0824-4267883, 9743715388, 9972283365ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News