ದಕ್ಷಿಣ ಕೊರಿಯದ ಪದಚ್ಯುತ ಅಧ್ಯಕ್ಷೆ ಬಂಧನ
Update: 2017-03-31 23:13 IST
ಸಿಯೋಲ್ (ದಕ್ಷಿಣ ಕೊರಿಯ), ಮಾ. 31: ದಕ್ಷಿಣ ಕೊರಿಯದ ಪದಚ್ಯುತ ಅಧ್ಯಕ್ಷೆ ಪಾರ್ಕ್ ಜಿಯೂನ್ ಹೈ ಅವರನ್ನು ಶುಕ್ರವಾರ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಯಿತು.
ಗುರುವಾರ ಸುದೀರ್ಘ ವಿಚಾರಣೆ ನಡೆದ ಬಳಿಕ, ಲಂಚ ಸ್ವೀಕಾರ, ಅಧಿಕಾರ ದುರುಪಯೋಗ, ಬಲಪ್ರಯೋಗ ಮತ್ತು ಸರಕಾರಿ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪಗಳಲ್ಲಿ ಅವರನ್ನು ಬಂಧಿಸಲು ಸಿಯೋಲ್ ಜಿಲ್ಲಾ ನ್ಯಾಯಾಲಯವು ವಾರಂಟ್ ಹೊರಡಿಸಿದೆ.