ಇಂದಿನಿಂದ ಬ್ರಹ್ಮರಕೂಟ್ಲು-ಸುರತ್ಕಲ್ ಟೋಲ್ ದರ ಏರಿಕೆ

Update: 2017-03-31 18:25 GMT

ಮಂಗಳೂರು, ಮಾ.31: ರಾಷ್ಟ್ರೀಯ ಹೆದ್ದಾರಿ 75ರಲ್ಲಿ (ಹಿಂದಿನ ರಾ.ಹೆ. 48) ಸಜಿಪ ಬಿ.ಮೂಡ ಗ್ರಾಮದ ಬ್ರಹ್ಮರಕೂಟ್ಲು ಟೋಲ್‌ಗೇಟ್ ಹಾಗೂ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ (ಹಳೆಯ ರಾ.ಹೆ 17)ಸುರತ್ಕಲ್ ಎನ್‌ಐಟಿಕೆ ಬಳಿಯ ಟೋಲ್ ದರ ಎ.1ರಿಂದ ಏರಿಕೆಯಾಗಲಿದೆ. ಸುರತ್ಕಲ್ ಎನ್‌ಐಟಿಕೆ ಟೋಲ್ ದರ: ಾರು, ಜೀಪು, ವ್ಯಾನ್ ಅಥವಾ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 50 ರೂ. (ಪ್ರಸ್ತುತ ದರ 45 ರೂ.) ಆಗಲಿದ್ದು, ಅದೇ ದಿನ ಮರಳಿ ಬರುವುದಾದರೆ ಹಿಂದಿನ ದರ (70 ರೂ.)ದಲ್ಲಿ ಬದಲಾವಣೆ ಇಲ್ಲ. 1 ತಿಂಗಳಲ್ಲಿ 50 ಬಾರಿ ಹಾದುಹೋದರೆ ಮಾಸಿಕ ಶುಲ್ಕ 1,600 ರೂ. (ಈಗ 1,535ರೂ.)ಆಗಲಿದೆ. ಜಿಲ್ಲೆಯ ಒಳಗೆ ನೋಂದಣಿಯಾಗಿರುವ ವಾಣಿಜ್ಯ ವಾಹನಗಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ.


ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ ಅಥವಾ ಮಿನಿ ಬಸ್ ಏಕಮುಖ ಸಂಚಾರಕ್ಕೆ 80 ರೂ. (75), ಮರಳಿ ಬಂದರೆ 115 ರೂ.(110)ಗೆ ಏರಿಕೆಯಾಗಲಿದೆ. ಮಾಸಿಕ ಪಾಸ್ 2,585 ರೂ. (2,435 ರೂ.) ಹಾಗೂ ಜಿಲ್ಲೆಯ ಒಳಗೆ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 40 ರೂ. ನಿಗದಿ ಮಾಡಲಾಗಿದೆ. ಬಸ್ ಅಥವಾ ಟ್ರಕ್ (2 ಆಕ್ಸೆಲ್) ಏಕಮುಖ ಸಂಚಾರಕ್ಕೆ 165 ರೂ. (155ರೂ.), ಅದೇ ದಿನ ವಾಪಸ್ ಬಂದರೆ 245 ರೂ. (235ರೂ.), 50 ಬಾರಿಗೆ ಮಾಸಿಕ ಪಾಸ್‌ಗೆ 5,420 ರೂ. (5,105ರೂ.), ಮೂರು-ಆ್ಯಕ್ಸಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರಕ್ಕೆ 175 ರೂ (170ರೂ.), ಅದೇ ದಿನ ಮರಳಿ ಬಂದರೆ 265 ರೂ. (255ರೂ.), ಮಾಸಿಕ ಪಾಸ್ 5,915 ರೂ. (5,670 ರೂ.) ನಿಗದಿ ಮಾಡಲಾಗಿದೆ.
ಭಾರೀ ನಿರ್ಮಾಣ ಯಂತ್ರಗಳು (ಎಚ್‌ಸಿಎಂ) ಅಥವಾ ಭೂ ಅಗೆತದ ಸಾಧನಗಳು (ಇಎಂಇ) ಅಥವಾ ಬಹು ಆ್ಯಕ್ಸೆಲ್ ವಾಹನ (ಎಂಎವಿ)(ನಾಲ್ಕರಿಂದ ಆರು ಆ್ಯಕ್ಸಲ್‌ಗಳದ್ದು) ಏಕಮುಖ ಸಂಚಾರಕ್ಕೆ 255 ರೂ. (240), ಮರಳಿ ಬಂದರೆ 385 ರೂ. (360), ಮಾಸಿಕ ಪಾಸ್ 8,500 (8,150) ರೂ.ಗೆ ಏರಲಿದೆ. ಮಿತಿ ಮೀರಿದ ಅಳತೆಯ ವಾಹನಗಳು (ಏಳು ಅಥವಾ ಅದಕ್ಕೂ ಹೆಚ್ಚು ಆ್ಯಕ್ಸೆಲ್‌ಗಳದ್ದು) ಏಕಮುಖ ಸಂಚಾರಕ್ಕೆ 310 ರೂ. (300), ಮರಳಿ ಬಂದರೆ 465 ರೂ. (445), ಮಾಸಿಕ ಪಾಸ್ 10,350 ರೂ.(9925) ನಿಗದಿಪಡಿಸಲಾಗಿದೆ.


ಬ್ರಹ್ಮರಕೂಟ್ಲು ಟೋಲ್ ದರ: ಜೀಪು, ವ್ಯಾನ್ ಅಥವಾ ಲಘು ಮೋಟಾರ್ ವಾಹನಗಳಿಗೆ ಏಕಮುಖ ಸಂಚಾರದಲ್ಲೂ ಏರಿಕೆಯಾಗಿದೆ. 20 ರೂ. ಬದಲು 25 ರೂ.ಗೆ ಏರಲಿದೆ. ಮರಳಿ ಬಂದರೆ ಪ್ರಸ್ತುತ ಇರುವ 35 ರೂ. ವನ್ನೇ ಮುಂದುವರಿಸಲಾಗಿದೆ. 1 ತಿಂಗಳಿಗೆ (50 ಬಾರಿಯಂತೆ)ಮಾಸಿಕ ಪಾಸ್ 770 ರೂ. (ಪ್ರಸ್ತುತ ದರ 735) ಮಾಡಲಾಗಿದ್ದು, ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ ಅಥವಾ ಮಿನಿಬಸ್‌ಗಳ - ಏಕಮುಖ ಸಂಚಾರಕ್ಕೆ ಚಾಲ್ತಿಯಲ್ಲಿರುವ 35 ರೂ. ಹಾಗೂ ಅದೇ ದಿನ ಮರಳಿದರೆ 50 ರೂ. ಅನ್ನು ಬದಲಾಯಿಸಲಿಲ್ಲ. ಮಾಸಿಕ ಪಾಸ್ 1,240 ರೂ. (1,190 ರೂ.) ನಿಗದಿಪಡಿಸಲಾಗಿದೆ.

ಬಸ್ ಅಥವಾ ಟ್ರಕ್ (ಎರಡು ಆ್ಯಕ್ಸಲ್‌ಗಳದ್ದು) ಏಕಮುಖ ಸಂಚಾರಕ್ಕೆ 80 ರೂ. (75ರೂ.), ಮರಳಿ ಬಂದರೆ 55ರೂ, ಮಾಸಿಕ ಶುಲ್ಕ 2,600 ರೂ. (2,495ರೂ.), 3 ಆ್ಯಕ್ಸಲ್ ವಾಣಿಜ್ಯ ವಾಹನಕ್ಕೆ ಏಕಮುಖ ಸಂಚಾರಕ್ಕೆ 85 ರೂ. (80ರೂ.), ಮರಳಿ ಬಂದರೆ 130 ರೂ., ಮಾಸಿಕ ಪಾಸ್ 2,840 ರೂ. (2,720ರೂ.) ಗೆ ಏರಿಕೆ ಮಾಡಲಾಗಿದೆ. ಭಾರೀ ನಿರ್ಮಾಣ ಯಂತ್ರಗಳು ಅಥವಾ ಭೂಅಗೆತದ ಸಾಧನಗಳು ಅಥವಾ ಬಹು ಆ್ಯಕ್ಸಲ್ ವಾಹನಗಳಿಗೆ (4ರಿಂದ 6 ಆ್ಯಕ್ಸಲ್) ಏಕಮುಖ ಸಂಚಾರಕ್ಕೆ 120 ರೂ. (115ರೂ.), ಮರಳಿ ಬಂದರೆ 185 ರೂ. (175ರೂ.), ಮಾಸಿಕ ಪಾಸ್ 4,080 ರೂ. (3,915ರೂ.) ಆಗಲಿದೆ. ಮಿತಿಮೀರಿದ ಅಳತೆ ವಾಹನಗಳು (7 ಅಥವಾ ಅದಕ್ಕಿಂತಲೂ ಹೆಚ್ಚು ಆ್ಯಕ್ಸಲ್‌ಗಳದ್ದು) ಏಕಮುಖ ಸಂಚಾರಕ್ಕೆ 150 ರೂ. (145), ಮರಳಿ ಬಂದರೆ 225 ರೂ. (215), ಮಾಸಿಕ ಪಾಸ್ 4,970 ರೂ.(4,765ರೂ.)ಗೆ ಏರಿಕೆಯಾಗಲಿದೆ.


ಬಂಡವಾಳ ವೆಚ್ಚ ಪೂರ್ಣ ವಸೂಲಾದ ನಂತರ ಬಳಕೆ ಶುಲ್ಕ ದರ (ಟೋಲ್)ವನ್ನು ಶೇ.40ರಷ್ಟು ಕಡಿಮೆ ಮಾಡಲಾಗುತ್ತದೆ. ಪ್ರಸ್ತುತ ಈ ಎರಡೂ ಟೋಲ್ ್ಲಾಝಾದಿಂದ 20 ಕಿ.ಮೀ. ವಿಸ್ತೀರ್ಣದೊಳಗೆ ವಾಸಿಸುವ ಎಲ್ಲ ವಾಣಿಜ್ಯೇತರ ವಾಹನಗಳಿಗೆ 245ರೂ. (ಪ್ರಸ್ತುತ 235ರೂ.)ತಿಂಗಳ ಪಾಸ್ ಲಭ್ಯವಿದೆ. ಟೋಲ್‌ಲ್ಾಝಾ ಜಿಲ್ಲೆಯಲ್ಲಿ ನೋಂದಾಯಿತಗೊಂಡ ವಾಣಿಜ್ಯ ವಾಹನ (ರಾಷ್ಟ್ರೀಯ ಪರವಾನಿಗೆಯಡಿ ಚಲಿಸುವ ವಾಹನಗಳನ್ನು ಹೊರತುಪಡಿಸಿ) ಶೇ.50 ರಿಯಾಯಿತಿ ದೊರೆಯಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್ ವಿಜಯ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News