ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಆರಿಫ್ ಆಯ್ಕೆ
Update: 2017-04-01 00:02 IST
ಮಂಜೇಶ್ವರ, ಮಾ.31: ಮಂಜೇಶ್ವರ ಪ್ರೆಸ್ ಕ್ಲಬ್ ವಾರ್ಷಿಕ ಮಹಾ ಸಭೆಯು ರವಿ ಪ್ರತಾಪ್ ನಗರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ 2017-2018ನೆ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆರಿಫ್ ಮಚ್ಚಂ ಪಾಡಿ(ವಾರ್ತಾಭಾರತಿ), ಉಪಾಧ್ಯಕ್ಷರಾಗಿ ರತನ್ ಕುಮಾರ್ ಹೊಸಂಗಡಿ(ಕಾರವಲ್), ರಹ್ಮಾನ್ ಉಪ್ಪಳ (ಮನೋರಮ), ಪ್ರ.ಕಾರ್ಯದರ್ಶಿಯಾಗಿ ರಹ್ಮಾನ್ ಉದ್ಯಾವರ (ಕರಾವಳಿ ಅಲೆ), ಜೊ.ಕಾರ್ಯದಶಿಗಳಾಗಿ ಸನಲ್ ಕುಮಾರ್ (ಮಾತೃಭೂಮಿ), ಜಗದೀಶ್ ಪ್ರತಾಪ್ ನಗರ(ವಿಜಯ ಕರ್ನಾಟಕ) ಕೋಶಾಧಿಕಾರಿಯಾಗಿ ರವಿ ಪ್ರತಾಪ್ ನಗರ (ಹೊಸದಿಗಂತ) ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಲತೀಫ್ ಉಪ್ಪಳ(ಕಾಸರಗೋಡು ವಿಷ್ಯನ್) ಸಲಾಂ ವರ್ಕಾಡಿ(ಜಯ ಕಿರಣ), ಅನೀಸ್ ಉಪ್ಪಳ(ಮಾಧ್ಯಮಂ), ಸಾಯಿಭದ್ರಾ ರೈ (ವಿಜಯ ಕರ್ನಾಟಕ), ಹರ್ಷಾದ್ ವರ್ಕಾಡಿ ಆಯ್ಕೆಯಾದರು. ರತನ್ ಕುಮಾರ್ ಸ್ವಾಗತಿಸಿದರು. ರಹ್ಮಾನ್ ಉದ್ಯಾವರ ವಂದಿಸಿದರು.