ಫರಂಗಿಪೇಟೆಯಲ್ಲಿ 'ನಂಡೆ ಪೆಂಙಲ್' ಅಭಿಯಾನ ಕಾರ್ಯಕ್ರಮ

Update: 2017-04-01 07:03 GMT

ಫರಂಗಿಪೇಟೆ ಎ.1: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಮ್ಮಿಕೊಂಡಿರುವ ಮಹತ್ತರವಾದ ಯೋಜನೆಯಾದ 'ನಂಡೆ ಪೆಂಙಲ್' ಅಭಿಯಾನದ ಕಾರ್ಯಕ್ರಮ ಫರಂಗಿಪೇಟೆಯ ಸಿಟಿ ಸೆಂಟರ್‌ನಲ್ಲಿ ಜರಗಿತು.

ಜಿಲ್ಲೆಯಲ್ಲಿ ಮದುವೆಯ ವಯಸ್ಸು ಮೀರಿ ಮೂವತ್ತು ದಾಟಿದ ನಾಲ್ಕು ಗೋಡೆಗಳ ಮದ್ಯೆ ತನ್ನ ಕನಸನ್ನು ಅದುಮಿಟ್ಟು ಅತ್ಯಂತ ದಾರುಣ ಜೀವನ ನಡೆಸುತ್ತಿರುವ ಸಹೋದರಿಯರ ಕನಸನ್ನು ನನಸಾಗಿಸುವ ಒಂದು ವರ್ಷದ ಈ ಅಭಿಯಾನವನ್ನು ಹಲವು ಸಂಘ ಸಂಸ್ಥೆ, ಉದಾರ ದಾನಿಗಳ, ಧಾರ್ಮಿಕ ವಿದ್ವಾಂಸರ, ಮಸೀದಿ ಆಡಳಿತ ಸಮಿತಿಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಅಭಿಯಾನದ ಪ್ರಚಾರ ಉಸ್ತುವಾರಿ ರಫೀಕ್ ಮಾಸ್ಟರ್ ಮಾತನಾಡಿ, ವರದಕ್ಷಿಣೆ, ಬಡತನ ಕಾರಣಕ್ಕೆ ಸಮುದಾಯದ 30 ದಾಟಿದ ಕೆಲವೊಂದು ಸಹೋದರಿಯರ ಕನಸು, ಬದುಕು ನುಚ್ಚುನೂರಾಗುತ್ತಿದೆ. ಈ ಸಹೋದರಿಯರ ಬದುಕು ಹಸನಾಗಿಸುವ ಅಭಿಯಾನವಾಗಿದೆ 'ನಂಡೆ ಪೆಂಙಲ್'. ಇಂತಹ ಹೆಣ್ಣು ಮಕ್ಕಳ ನಮ್ಮ ಸಹೋದರಿ ಯರು ಎಂದು ಭಾವಿಸಿ ಅಭಿಯಾನದಲ್ಲಿ ಮೊಹಲ್ಲಾ ಆಡಳಿತ ಸಮಿತಿ, ಸಂಘ ಸಂಸ್ಥೆಗಳು ಶ್ರಮಿಸಬೇಕು ಎಂದು ಕೋರಿದರು.

'ನಂಡೆ ಪೆಂಙಲ್' ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷ ನೌಶಾದ್ ಹಾಜಿ, ಸರ್ವೇ ತಂಡದ ಮುಖ್ಯಸ್ಥ ಡಿ.ಅಬ್ದುಲ್ ಹಮೀದ್ ಮತನಾಡಿದರು, ಸಭೆಯಲ್ಲಿ ಮಸೀದಿ ಆಡಳಿತ ಸಮಿತಿಯ ಸದಸ್ಯರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಉದ್ಯಮಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News