×
Ad

ಚಲಿಸುತ್ತಿರುವ ಕೆಎಸ್ಸಾರ್ಟಿಸಿ ಬಸ್‌ಗೆ ಬೆಂಕಿ: ಪ್ರಯಾಣಿಕರು ಪವಾಡಸದೃಶ ಪಾರು

Update: 2017-04-01 16:37 IST

ತೊಡುಪುಝ,ಎ.1: ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಲೋಫ್ಲೋರ್ ಬಸ್‌ಗೆ ಬೆಂಕಿ ಹಿಡಿದು ಸಂಪೂರ್ಣ ನಾಶಗೊಂಡಿದೆ. ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೊಡುಪುಝದಿಂದ ಇಡುಕ್ಕಿಗೆ ಹೋಗುತ್ತಿದ್ದ ಬಸ್ ಅವಘಡಕ್ಕೊಳಗಾಯಿತು. ಬೆಳಗ್ಗೆ ಒಂಬತ್ತೂವರೆ ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.

ನಾಡುಕ್ಕಾಣಿ ಆರನೆ ತಿರುವಿನಲ್ಲಿ ಬಸ್‌ನಿಂದ ಹೊಗೆಯೇಳುತ್ತಿರುವುದು ಕಂಡುಬಂದಿದೆ.ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ಎಲ್ಲಪ್ರಯಾಣಿಕರು ಇಳಿದು ಹೊರಬಂದ ಬಳಿಕ ಬಸ್ ಸುಟ್ಟು ಹೋಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News