ಎ.2ರಂದು ಕಿನ್ಯಕ್ಕೆ ಪೇರೋಡ್ ಉಸ್ತಾದ್ ಬೇಟಿ
ಮಂಗಳೂರು, ಎ.1: ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಹಾಗೂ ಎಸ್ ವೈಎಸ್ ಕೇರಳ ರಾಜ್ಯಾಧ್ಯಕ್ಷ, ಖ್ಯಾತ ವಾಗ್ಮಿ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಎ.2, ರವಿವಾರ ಸಂಜೆ ಕಿನ್ಯ ಬೆಳರಿಂಗೆಗೆ ಆಗಮಿಸಲಿದ್ದಾರೆ.
ಮಸ್ಜಿದುಲ್ ಬುಖಾರಿ, ಎಸ್ ವೈಎಸ್, ಎಸ್ಎಸ್ಎಫ್ ಗಳ ಜಂಟಿ ಆಶ್ರಯದಲ್ಲಿ ಇಲ್ಲಿನ ಸಯ್ಯಿದ್ ಪೊಸೋಟ್ ತಂಙಳ್ ವೇದಿಕೆಯಲ್ಲಿ ನಡೆಯುವ ಬೃಹತ್ ಸುನ್ನೀ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡುವರು.
ಸಯ್ಯಿದ್ ಕೆ.ಎಸ್.ಅಲವೀ ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ಪ್ರಾರ್ಥನೆ ನಡಸುವರು. ಸುನ್ನೀ ಜಂಇಯತುಲ್ ಉಲಮಾ ರಾಜ್ಯ ಉಪಾಧ್ಯಕ್ಷ ಶರಫುಲ್ ಉಲಮಾ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಉದ್ಘಾಟಿಸುವರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಕೆ. ಎಂ. ಅಬೂಬಕರ್ ಸಿದ್ದೀಖ್, ಎಸ್ ವೈಎಸ್ ಜಿಲ್ಲಾ ಉಪಾಧ್ಯಕ್ಷ ಮುಹಮ್ಮದಲೀ ಸಖಾಫಿ ಅಶ್ಅರಿಯ, ಜಂಇಯತುಲ್ ಉಲಮಾ ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ, ಹುಸೈನಿಯ ಎಜುಕೇಶನ್ ಸೆಂಟರ್ ಉಪಾಧ್ಯಕ್ಷ ಇಝ್ಝುದ್ದೀನ್ ಅಹ್ಸನಿ ಭಾಷಣ ಮಾಡಲಿದ್ದಾರೆ.
ಸಚಿವ ಯು.ಟಿ.ಖಾದರ್, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ಕೆಸಿಎಫ್ ದುಬಾಯಿ ಘಟಕಾಧ್ಯಕ್ಷ ಮಹ್ಬೂಬ್ ಸಖಾಫಿ, ಎಸ್ ಜೆಎಂ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ ತಿಳಿಸಿದ್ದಾರೆ.