ಗುಜರಾತ್: ತಾಯಂದಿರ ಮರಣ ಪ್ರಮಾಣದಲ್ಲಿ ಏರಿಕೆ

Update: 2017-04-01 14:48 GMT

 ಅಹ್ಮದಾಬಾದ್, ಎ.1: ಕಳೆದ ಮೂರು ವರ್ಷಗಳಿಂದ ಗುಜರಾತ್‌ನಲ್ಲಿ ತಾಯಂದಿರ ಮರಣ ಪ್ರಮಾಣದಲ್ಲಿ ಹೆಚ್ಚಳವಾಗಿದೆ . ಆದರೆ ಮಗು ಮತ್ತು ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ.

2013-14ರಲ್ಲಿ ತಾಯಂದಿರ ಮರಣ ಪ್ರಮಾಣ 72 (ಪ್ರತೀ 1 ಲಕ್ಷ ಹೆರಿಗೆ ಸಂದರ್ಭ) ಆಗಿದ್ದರೆ, 2014-15ರಲ್ಲಿ 80ಕ್ಕೆ ಮತ್ತು 2015-16ರಲ್ಲಿ 85ಕ್ಕೆ ಏರಿದೆ. ಆದ್ದರಿಂದ ನಿಗದಿತ ಗುರಿ ( 2017ರ ಮಾರ್ಚ್ ವೇಳೆಗೆ 67ನ್ನು ) ಸಾಧಿಸುವುದು ಕಷ್ಟವಾಗಿದೆ ಎಂದು ಸಿಎಜಿ ವರದಿ ತಿಳಿಸಿದ್ದು ಈ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು.

  ಆದಾಗ್ಯೂ, ಶಿಶುಗಳ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಇಳಿಮುಖವಾಗಿದೆ. ಆದರೆ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದ ಬಳಿಕವೂ ತಾಯಂದಿರ ಮರಣ ಪ್ರಮಾಣವನ್ನು ನಿಯಂತ್ರಿಸಲು ಅಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ. ಗರ್ಭಿಣಿ ಮಹಿಳೆಯರಿಗೆ ಮತ್ತು ಅಸ್ವಸ್ಥ ನವಜಾತ ಶಿಶುಗಳಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ‘ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ’ವನ್ನು ಕೇಂದ್ರ ಸರಕಾರ 2011ರ ಜೂನ್‌ನಲ್ಲಿ ಅನುಷ್ಠಾನಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News