ಪಡುಬಿದ್ರಿ ಬಳಿ ಬಸ್ - ಜೆಸಿಬಿ ಢಿಕ್ಕಿ; ಹಲವರಿಗೆ ಗಾಯ
Update: 2017-04-01 21:48 IST
ಪಡುಬಿದ್ರಿ, ಎ.1: ಸಮೀಪದ ಕಣ್ಣಂಗಾರ್ ಬೀಡು ಬಳಿ ಜೆಸಿಬಿ ಹಾಗೂ ಬಸ್ಸಿನ ಮಧ್ಯೆ ನಡೆದ ಅಪಘಾತದಲ್ಲಿ ಬಸ್ಸು ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಉಡುಪಿ ಕಡೆಗೆ ಸಂಚರಿಸುತಿದ್ದ ಎಕ್ಸ್‌ಪ್ರೆಸ್ ಬಸ್ ಹಾಗೂ ಪಡುಬಿದ್ರಿ ಕಡೆಯಿಂದ ಬರುತಿದ್ದ ಜೆಸಿಬಿ ಮಧ್ಯೆ ಢಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಬಸ್ ಪಲ್ಟಿಯಾಗಿದ್ದು, ಜೆಸಿಬಿ ಪಕ್ಕದ ಹೊಂಡಕ್ಕೆ ಬಿದ್ದಿದೆ. ಬಸ್ ಸಂಪೂರ್ಣ ಜಖಂಗೊಂಡಿದ್ದು, ಜೆಸಿಬಿ ಚಾಲಕ ವಿರುದ್ಧ ದಿಕ್ಕಿನಲ್ಲಿ ಸಂಚರಿಸುದ್ದು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.