ಭಾಷೆಯ ಬಗೆಗಿನ ಅಭಿಮಾನ ದಿಂದ ಮಾತೃ ಭಾಷೆ ನಮ್ಮಲ್ಲಿ ಉಳಿಯಲು ಸಾಧ್ಯ: ಸಾಹಿತಿ ಆಸ್ಟಿನ್ ಡಿಸೋಜ
ಮಂಗಳೂರು.ಎ,1:ಭಾಷೆಯ ಬಗೆಗಿನ ಅಭಿಮಾನ ಮುಖ್ಯ ಆಗ ನಮ್ಮ ಮಾತೃ ಭಾಷೆ ನಮ್ಮಲ್ಲಿ ಉಳಿಯಲು ಸಾಧ್ಯ ಎಂದು ಕೊಂಕಣಿ ಸಾಹಿತಿ ಆಸ್ಟಿನ್ ಡಿಸೋಜ ತಿಳಿಸಿದ್ದಾರೆ.
ಅವರು ಇಂದು ಕೊಂಕಣಿ ಬರಹಗಾರರು ಮತ್ತು ಕಲಾವಿದರ ಸಂಘಟನೆಯ ಆಶ್ರಯದಲ್ಲಿ ನಗರದ ಮಿಸ್ಚಿಫ್ ಮಾಲ್‌ನ ಆರ್ಕಿಡ್ ಗ್ಯಾಲರಿಯಲ್ಲಿ ಹಮ್ಮಿಕೊಂಡ ಸಂವಾದ ಗೊಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಾನು ಅಮೇರಿಕಾದಲ್ಲಿ ಮೂವತ್ತು ವರ್ಷ ಇದ್ದರೂ ಕೊಂಕಣಿಯಲ್ಲಿ ವ್ಯವಹರಿಸುವುದನ್ನು ಬಿಟ್ಟಿಲ್ಲ ಆ ಕಾರಣದಿಂದ ಅದು ನನ್ನಲ್ಲಿ ಉಳಿದಿದೆ. ಆಲಸ್ಯವಿಲ್ಲದೆ ಚುರುಕಾಗಿ ನಮ್ಮನ್ನು ಯಾವೂದೇ ಚಟುವಟಿಕೆ ತೊಡಗಿಸಿಕೊಂಡಾಗ ನಾವು ಕ್ರೀಯಾಶೀಲರಾಗಿರಲು ಸಾಧ್ಯ ಎಂದು ಆಸ್ಟಿನ್ ಡಿ ಸೋಜ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಾಲ್ಕು ಕೊಂಕಣಿ ಪತ್ರಿಕೆಗಳ ಸಂಪಾದಕರಾಗಿದ್ದ ಸಂಪಾದಕರಾಗಿದ್ದಾಗ ಕಥೆಯೊಂದನ್ನು ಬರೆದಾಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವೊಂದನ್ನು ದಾಖಲಿಸಿರುವುದು ನೋವನ್ನುಂಟು ಮಾಡಿದೆ.ಆಸ್ಟಿನ್ ಡಿ ಸೋಜ ಬಳಿಕ ರಾಜಕೀಯ ಕ್ಷೇತ್ರವನ್ನು ಸೇರಲು ಕರೆ ಬಂದಿತ್ತು ಆದರೆ ರಾಜಕೀಯ ಸೇರುವ ಆಸಕ್ತಿ ಇಲ್ಲದ ಕಾರಣ ತಾನು ಹಿಂದೆ ಸರಿದೆ ಎಂದು ಸಂವಾದ ಗೋಷ್ಠಿಯಲ್ಲಿ ಆಸ್ಟಿನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ರೊನಾಲ್ಡ್ ಸಿಕ್ವೇರಾ ಅವರ 'ಗರ್ಜೇರಾ ಪೊಡತ್ ' ಕೊಂಕಣಿ ಕೃತಿಯನ್ನು ಆಸ್ಟಿನ್ ಡಿ ಸೋಜ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಪ್ಲೋರಿನ್ ರೋಚ್,ವಾಲ್ಟರ್ ನಂದಳಿಕೆ, ಬಸ್ತಿ ವಾಮನ ಶೆಣೈ ಮೊದಲಾದವರು ಉಪಸ್ಥಿತರಿದ್ದರು.