×
Ad

​ಕೊರಗ ತನಿಯ ದೈವ ನಿಂದನೆ ಆರೋಪ: ದೂರು

Update: 2017-04-01 22:12 IST

ಮಂಗಳೂರು, ಎ.1: ಸುರತ್ಕಲ್‌ನ ಚಿತ್ರಾಪುರದಲ್ಲಿ ನಡೆದ ಕೊರಗ ತನಿಯ ಹಾಗೂ ಏಳು ಶಕ್ತಿ ಸ್ವರೂಪಿಣಿ ದೈವಗಳನೇಮೋತ್ಸವದಲ್ಲಿ ಕೊರಗ ಸಮುದಾಯ ಹಾಗೂ ಸಮುದಾಯದ ಮಹಿಳೆಯರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚಿತ್ರಾಪುರದ ಮಾಂಕಾಳಿ ದೈವಸ್ಥಾನದ ಪದಾಧಿಕಾರಿಗಳು ಹಾಗೂ ನೇಮೋತ್ಸವದ ಆಯೋಜಕರ ವಿರುದ್ಧ ಎಸ್‌ಸಿ ಎಸ್‌ಟಿ ಕಾಯಿದೆ ಹಾಗೂ ಕಲಂ 504ರನ್ವಯ ದೂರು ನೀಡಲಾಗಿದೆ.

ಮಾ.18ರಂದು ಚಿತ್ರಾಪುರದಲ್ಲಿ ನೇಮೋತ್ಸವ ನಡೆದಿತ್ತು. ನೇಮೋತ್ಸವದಲ್ಲಿ ಮಹಿಳೆಯರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಮಾ.29ರಂದು ಎದುರುಪದವು ನಿವಾಸಿ ಸುಂದರ ಎಂಬವರು ದೂರು ನೀಡಿದ್ದಾರೆ.

ನೇಮೋತ್ಸವದಲ್ಲಿ ಮಾಂಕಾಳಿ ದೈವಸ್ಥಾನದಲ್ಲಿ ಕೊರಗ ಸಮುದಾಯವನ್ನು ಕೀಳಾಗಿ ಅವಮಾನಿಸಿ, ಕೊರಗ ಮಹಿಳೆಯರನ್ನು ಹಾಗೂ ಕೊರಗ ತನಿಯ ದೈವವನ್ನು ನಿಂದಿಸಲಾಗಿದೆ. ಇದರಿಂದ ಸಮಾಜಕ್ಕೆ ಅಪಮಾನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News