×
Ad

ರಂಗ್-ರಂಗ್- ರಂಗಭೂಮಿ ಕಾರ್ಯಕ್ರಮ

Update: 2017-04-01 22:32 IST

ಉಡುಪಿ, ಎ.1: ಪರರ ಕಷ್ಟಕ್ಕೆ ಸ್ಪಂದಿಸುವ ಮಾನಸಿಕತೆಯನ್ನು ಬೆಳೆಸಿಕೊಳ್ಳಲು ರಂಗಭೂಮಿ ಪ್ರೇರಣೆಯಾಗಿದ್ದು, ನಮ್ಮನ್ನು ನಾವು ಮರೆತು ಇನ್ನೊಬ್ಬರಾಗಿ ಬದುಕುವುದೇ ರಂಗಭೂಮಿಯಾಗಿದೆ ಎಂದು ಯಕ್ಷಗಾನ ಕಲಾವಿದ ಪ್ರೊ ಎಂ. ಎಲ್. ಸಾಮಗ ಹೇಳಿದ್ದಾರೆ.

ಉಡುಪಿ ರಂಗಭೂಷಣ ಸಾಂಸ್ಕೃತಿಕ ಸಂಘದ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಶನಿವಾರ ವಳಕಾಡಿನ ರಂಗನಾಥ ಶೆಣೈ ವೇದಿಕೆಯಲ್ಲಿ ಆಯೋಜಿಸಲಾದ ರಂಗ್-ರಂಗ್- ರಂಗಭೂಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ರಂಗಕರ್ಮಿ ಕಾಸರಗೋಡು ಚಿನ್ನಾ ವಹಿಸಿದ್ದರು. ಉಡುಪಿ ಅನಂತ ವೈದಿಕ ಕೇಂದ್ರದ ಸಂಸ್ಥಾಪಕ ಚೇಂಪಿ ರಾಮಚಂದ್ರ ಭಟ್, ನೃತ್ಯ ವಿದುಷಿ ಪ್ರತಿಭಾ ಎಂ.ಎಲ್.ಸಾಮಗ, ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ಸ್ಥಾಪಕ ಕಾರ್ಯದರ್ಶಿ ಡಾ.ಪ್ರಕಾಶ್ ಶೆಣೈ ಶುಭಾಶಂಸನೆಗೈದರು.

ಈ ಸಂದರ್ದಲ್ಲಿ ಯಕ್ಷಗಾನ ಕಲಾವಿದ ಸುಧಾಕರ ಸಾಲಿಯಾನ್ ಮಂಗ ಳೂರು ಹಾಗೂ ಚಿತ್ರ ಕಲಾವಿದೆ ಅದಿತಿ ಆಚಾರ್ಯ ಅವರನ್ನು ಸಮ್ಮಾನಿಸ ಲಾಯಿತು. ರಂಗಭೂಷಣ ಸಂಸ್ಥೆಯ ಆಡಳಿತ ನಿರ್ದೇಶಕ ಶಶಿಭೂಷಣ ಕಿಣಿ ತೋನ್ಸೆ ಉಪಸ್ಥಿತರಿದ್ದರು. ರಂಗಭೂಷಣ ನಿರ್ದೇಶಕ ಪಿ.ಲಕ್ಷ್ಮಣ್ ಆರ್. ಶೆಣೈ ಸ್ವಾಗತಿಸಿದರು. ಕೆ.ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News