×
Ad

ಉಜ್ವಲ ಯೋಜನೆಯ ಪ್ರಗತಿ ಪರಿಶೀಲನೆ

Update: 2017-04-02 00:05 IST

ಉಡುಪಿ, ಎ.1: ಜಿಲ್ಲೆಯಲ್ಲಿ ‘ಉಜ್ವಲ ಯೋಜನೆ’ಯಡಿ 3,767 ಅರ್ಹ ಫಲಾ ನುವಿಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಯೋಜನೆ ವಿಸ್ತರಿಸಲು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದರು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ಉಜ್ವಲ ಯೋಜ ನೆಯಡಿ ಎರಡನೆ ಹಂತದಲ್ಲಿ ರಾಜ್ಯದ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದರು. ಉಜ್ವಲ ಯೋಜನೆಯ ಮಾರ್ಗ ಸೂಚಿಯನ್ವಯ ಆಯ್ಕೆಯಾಗುವ ಪ್ರತಿ ಫಲಾನುಭವಿಗೆ ರಾಜ್ಯ ಘಟಕದಿಂದ ಗರಿಷ್ಠ 1,000 ರೂ. ಸಹಾಯಧನದಲ್ಲಿ 2 ಬರ್ನರ್‌ನ ಗ್ಯಾಸ್ ಸ್ಟವ್ ನೀಡಲು ಅವಕಾಶವಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕರು ತಿಳಿಸಿದರು.

ಸರಕಾರದ ನಿರ್ದೇಶನದಂತೆ ಎಲ್ಲ ಅನಿಲ ಏಜೆನ್ಸಿಯವರು ಈ ಸಂಬಂಧ ಕ್ರಮ ವಹಿಸಬೇಕಿದ್ದು, ಇದಕ್ಕೆ ಜಿಲ್ಲೆ ಸಜ್ಜಾಗಿದೆ ಎಂದು ಜಿಲ್ಲೆ ನೋಡಲ್ ಅಧಿಕಾರಿ ಮಣಿಕಂಠನ್ ಹೇಳಿದರು. ಎಲ್ಲ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲೇ ನಡೆಸಲಾಗುತ್ತಿದ್ದು, ಇದಕ್ಕೆಂದೇ ಆನ್‌ಲೈನ್ ಪೋರ್ಟಲ್ ಸಹ ನೀಡಲಾಗಿದೆ ಎಂದರು.

ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಎಸ್. ಯೋಗೇಶ್ವರ್, ವಿವಿಧ ಗ್ಯಾಸ್ ಏಜೆನ್ಸಿಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿ ತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News