ಯೋಗೇಶ್ವರ್‌ಗೆ ವರ್ಗಾವಣೆ
Update: 2017-04-02 00:07 IST
ಉಡುಪಿ, ಎ.1: ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾಗಿದ್ದ ಎಸ್.ಯೋಗೇಶ್ವರ್ ಕಾರವಾರ ನಗರಸಭೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಮುಂದಿನ ಆದೇಶದವರೆಗೆ ಈ ಹುದ್ದೆಯನ್ನು ಸಹಕಾರಿ ಸಂಘಗಳ ಉಪನಿಬಂಧಕರಾಗಿರುವ ಪ್ರವೀಣ್ ನಾಯಕ್‌ರಿಗೆ ವಹಿಸಲಾಗಿದೆ.
ಎಸ್.ಯೋಗೇಶ್ವರ್ ಪ್ರಭಾರ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮುಜುರಾಯಿ ಇಲಾಖೆಯ ಸಹಾಯಕ ಆಯುಕ್ತರ ಹುದ್ದೆಗೆ ಮಂದಾರ್ತಿ ದುರ್ಗಾಪರಮೇಶ್ವರಿ ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ರವಿ ಕೊಟಾರಗಸ್ತಿ, ಕೊಲ್ಲೂರು ಮೂಕಾಂಬಿಕಾ ದೇವಳದ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್, ನಮೂನೆ 7ಎ ಅರ್ಜಿಗಳ ವಿಚಾರಣಾ ಭೂ ನ್ಯಾಯ ಮಂಡಳಿ ಹುದ್ದೆಗೆ ಉಡುಪಿ ಭೂ ನ್ಯಾಯ ಮಂಡಳಿಯ ವಿಶೇಷ ಸಹಾಯಕ ಆಯುಕ್ತ ರವಿಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.