ಮಿತ್ತೂರು: ಅಜ್ಮೀರ್ ವೌಲಿದ್
Update: 2017-04-02 00:10 IST
ಮಾಣಿ, ಎ.1: ಮಾಣಿ ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್‌ನ ಆಶ್ರಯದಲ್ಲಿ ಅಜ್ಮೀರ್ ವೌಲಿದ್ ಹಾಗೂ ಏರ್ವಾಡಿ ಶುಹದಾ ನೇರ್ಚೆ ಎ.2ರಂದು ಕೆಜಿಎನ್ ಮಿತ್ತೂರಿನಲ್ಲಿ ನಡೆಯಲಿದೆ.
ಬೆಳಗ್ಗೆ 7ಕ್ಕೆ ಸಮಾರಂಭ ನಡೆಯಲಿದೆ. ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡುವರು. ಕರ್ನಾಟಕ ಸುನ್ನಿ ಜಂ-ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.