ಮಕ್ಕಳಿಗೆ ಕ್ರೈಸ್ತ ಹೆಸರನ್ನೇ ಇಡಬೇಕು: ಇಡುಕ್ಕಿ ಬಿಷಪ್
Update: 2017-04-02 13:31 IST
ಕೊಚ್ಚಿ, ಎ. 2: ಕ್ರೈಸ್ತ ವಿಶ್ವಾಸಿಗಳು ತಮ್ಮ ಮಕ್ಕಳಿಗೆ ಕ್ರೈಸ್ತ ಹೆಸರನ್ನು ಇಡಬೇಕೆಂದು ಇಡುಕ್ಕಿ ಬಿಷಪ್ ಮ್ಯಾಥ್ಯೂ ಆನಿಕುಯಿಕ್ಕಾಟ್ಟಿಲ್ ಹೇಳಿದ್ದಾರೆ. ಕ್ರೈಸ್ತ ಹೆಸರಿನಲ್ಲಿ ಪರಿಚಿತಗೊಳ್ಳುವುದೆಂದರೆ ಜೀಸಸ್‌ಗೆ ಸಾಕ್ಷ್ಯ ವಹಿಸುವುದು ಮಾತ್ರವಲ್ಲ ಕ್ರೈಸ್ತ ಹೆಸರಿಗೆ ಹೆಚ್ಚು ಮಹತ್ವವಿದೆ ಎಂದು ಅವರು ಕರೆ ನೀಡಿದ್ದಾರೆ.
ಅರ್ಥರಹಿತವಾದ ಹೆಸರನ್ನು ಮಕ್ಕಳಿಗೆ ಇರಿಸುವುದು ಸರಿಯಲ್ಲ. ವಿಶ್ವಾಸ ಮತ್ತು ಕ್ರೈಸ್ತೀಯ ಮಾದರಿಯನ್ನು ಪ್ರತಿಬಿಂಬಿಸುವ ಪರಂಪರಾಗತ ಹೆಸರುಗಳನ್ನು ಉಪಯೋಗಿಸಲು, ಅದರಲ್ಲಿ ಅಭಿಮಾನ ಹೊಂದಲು ಕ್ರೈಸ್ತರಿಗೆ ಸಾಧ್ಯವಾಗಬೇಕು. ಪವಿತ್ರರ ಮಾದರಿಯನ್ನು ಅವರ ಹೆಸರುಗಳ ಮೂಲಕ ಮುಂದಿನ ತಲೆಮಾರಿಗೆ ತಲುಪಿಸಬೇಕೆಂದು ಅವರು ಹೇಳಿದ್ದಾರೆ.