ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಂಧ್ರಪ್ರದೇಶ ಸಂಪುಟಕ್ಕೆ ಸೇರ್ಪಡೆ

Update: 2017-04-02 09:21 GMT

ಅಮರಾವತಿ(ಆಂಧ್ರಪ್ರದೇಶ), ಎ.2: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್, ವೈಎಸ್‌ಆರ್ ಕಾಂಗ್ರೆಸ್‌ನಿಂದ ಟಿಡಿಪಿ-ಬಿಜೆಪಿ ಮೈತ್ರಿಕೂಟಕ್ಕೆ ಪಕ್ಷಾಂತರಗೊಂಡಿರುವ ನಾಲ್ವರು ಶಾಸಕರು ಹಾಗೂ ಇತರ ಆರು ಶಾಸಕರು ಆಂಧ್ರಪ್ರದೇಶ ಸಂಪುಟಕ್ಕೆ ರವಿವಾರ ಸೇರ್ಪಡೆಯಾದರು.

2014ರ ಜೂ.8 ರಂದು ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿ ಸಂಪುಟ ವಿಸ್ತರಣೆ ನಡೆದಿದೆ.ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಇದೀಗ ಆಂಧ್ರ ಸರಕಾರದ ಸಚಿವ ಸಂಪುಟದ ಗಾತ್ರ 26ಕ್ಕೇರಿದೆ.

 ಲೋಕೇಶ್ ಕಳೆದ ತಿಂಗಳು ಎಂಎಲ್‌ಸಿ ಆಗಿ ಆಯ್ಕೆಯಾಗಿದ್ದರು. 34ರ ಹರೆಯದ ಲೋಕೇಶ್ ಸ್ಟಾನ್‌ಫೋರ್ಡ್ ಬ್ಯುಸಿನೆಸ್ ಸ್ಕೂಲ್‌ನ ಪದವೀಧರರಾಗಿದ್ದು, ಟಿಡಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ಪ್ರಮಾಣವಚನ  ಸಮಾರಂಭದಲ್ಲಿ ಲೊಕೇಶ್‌ರ ತಾಯಿ ಭುನವೇಶ್ವರಿ ಹಾಗೂ ಪತ್ನಿ ಬ್ರಾಹ್ಮಿಣಿ ಉಪಸ್ಥಿತರಿದ್ದರು.

ಭೂಮಾ ಅಖಿಲ ಪ್ರಿಯಾ(28) ನಾಯ್ಡು ಸಂಪುಟಕ್ಕೆ ಸೇರಿದ ಯುವ ಸದಸ್ಯರಾಗಿದ್ದಾರೆ.ಪ್ರಿಯಾರ ತಂದೆ ಭೂಮಾ ರೆಡ್ಡಿ ಕಳೆದ ತಿಂಗಳು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News