ಜಗನ್ನಾಥ ದೇಗುಲದೊಳಗೆ ಬಾಲಕಿಯ ಮೇಲೆ ಅತ್ಯಾಚಾರ

Update: 2017-04-02 10:51 GMT

ಬರಿಪಾಡಾ(ಒಡಿಶಾ),ಎ.2: ಇಲ್ಲಿಯ ಪ್ರಸಿದ್ಧ ಜಗನ್ನಾಥ ದೇಗುಲದೊಳಗೆ ಯುವಕನೋರ್ವ ಅಂಗವಿಕಲ, ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ್ದಾನೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ದೇಗುಲ ನಿರ್ಜನವಾಗಿದ್ದಾಗ 11ರ ಹರೆಯದ ಬಾಲಕಿ ದೇವರ ದರ್ಶನ ಪಡೆಯಲು ತೆರಳಿದ್ದಳು. ಈ ಸಂದರ್ಭವನ್ನು ದುರುಪಯೋಗಿಸಿಕೊಂಡ 28ರ ಹರೆಯದ ಆರೋಪಿಯು ಆಕೆಗೆ ನೆರವಾಗುವ ಸೋಗಿನಲ್ಲಿ ಆಕೆಯನ್ನು ಕೈಕಾಲು ತೊಳೆಯುವ ಮಂಟಪದತ್ತ ಕರೆದೊಯ್ದು ಅತ್ಯಾಚಾರ ನಡೆಸಿ ಪರಾರಿಯಾಗಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ರಕ್ಷಿಸಿದ ಗ್ರಾಮಸ್ಥರು ಆರೋಪಿಯನ್ನು ಪತ್ತೆ ಹಚ್ಚಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಬಾಲಕಿಯನ್ನು ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News