ವಿ.ಆರ್.ಯುನೈಟೆಡ್ ಸಂಘಟನೆ ಉದ್ಘಾಟನೆ; ಸಮಾಜ ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ
ಮಂಗಳೂರು,ಎ.2:ವಿ.ಆರ್.ಯುನೈಟೆಡ್ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ಯಾನದ ಭಾರತ ಸೇವಾಶ್ರಮ,ವೈಟ್ ಡೌಸ್ ಕಂಕನಾಡಿ ಹಾಗೂ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ ಕಂಕನಾಡಿ ಮೈದಾನದಲ್ಲಿಂದು ಉದ್ಘಾಟಿಸಿದರು.
ಕನ್ಯಾನದ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್,ವೈಟ್ ಡೌಸ್ ಕಂಕನಾಡಿಯ ನಿರ್ದೇಶಕಿ ಕೋರಿನ್ ರಸ್ಕಿನಾ ಹಾಗೂ ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್ ಪರವಾಗಿ ರಫೀಕ್ ಮಾಸ್ಟರ್ ಸನ್ಮಾನ ಸ್ವೀಕರಿಸಿದರು.
ಸೌರ್ಹಾದತೆಗಾಗಿ ಜಾತಿ,ಮತ ಭೇದ ಪರಿಗಣಿಸದೆ ಜೊತೆಯಾಗಿ ಸಂಘಟನೆಯಾ ಗುತ್ತಿರುವುದು ಮತ್ತು ಯುವಕರು ಈ ದಿಸೆಯಲ್ಲಿ ಒಂದು ಗೂಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸದಾನಂದ ಶೆಟ್ಟಿ ಶುಭ ಹಾರೈಸಿದರು.ಸಾಮಾಜಿಕ ಹೊಣೆಗಾರಿಕೆಗಾಗಿ ರಾಜಕೀಯ ರಹಿತವಾಗಿ ಎಲ್ಲರು ಒಂದಾಗುತ್ತಿರುವ ಸಂಘಟನೆ ಜಿಲ್ಲೆಗೆ ಮಾದರಿಯಾಗಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಶುಭ ಹಾರೈಸಿದರು.
ಸಮಾರಂಭದಲ್ಲಿ ಮೇಯರ್ ಕವಿತಾ ಸನಿಲ್,ಕಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ,ಉದ್ಯಮಿ ಸೌಂದರ್ಯ ರಮೇಶ್,ವಿ.ಆರ್.ಯುನೈಟೆಡ್‌ನ ಅಧ್ಯಕ್ಷ ಅಸ್ಫರ್ ರಜಾಕ್,ಗೌರವಾಧ್ಯಕ್ಷರಾದ ಡಾ.ಇಪ್ತಿಕಾರ್ ಅಲಿ,ವಿ.ಎಲ್.ರೇಗೋ,ಸಂದೇಶ್ ಶೆಟ್ಟಿ,ಕೀರ್ತನ್ ಶೆಟ್ಟಿ,ಜಿತೇಂದ್ರ ರಾವ್ ,ರವೀಂದ್ರ ಶೆಟ್ಟಿ ಉಳಿಯದೊಟ್ಟು,ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ,ಆಶಾ ಡಿಸಿಲ್ವ,ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.ಸುದೇಶ್ ಭಂಡಾರಿ ಸ್ವಾಗತಿಸಿದರು,ಸತೀಶ್ ಇರಾ ಕಾರ್ಯಕ್ರಮ ನಿರೂಪಿಸಿದರು.