ಅಂಬ್ಯುಲೆನ್ಸ್ ಢಿಕ್ಕಿ: ಪಾದಾಚಾರಿ ಮೃತ್ಯು
Update: 2017-04-02 21:48 IST
ಕೋಟ, ಎ.2: ತೆಕ್ಕಟ್ಟೆ ಗ್ರಾಮದ ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎ.1ರಂದು ರಾತ್ರಿ 7.30ರ ಸುಮಾರಿಗೆ ಅಂಬ್ಯುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಬದಿ ನಿಂತುಕೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿ ದ್ದಾರೆ.
ಮೃತರನ್ನು ತೆಕ್ಕಟ್ಟೆಯ ಬಾಬು ನಾಯ್ಕೆ ಎಂದು ಗುರುತಿಸಲಾಗಿದೆ. ಕೋಟ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಅಂಬ್ಯುಲೆನ್ಸ್ ಏಕಮುಖ ಸಂಚಾರದ ರಸ್ತೆಯನ್ನು ದಾಟಲು ನಿಂತಿದ್ದ ಬಾಬು ನಾಯ್ಕೆಗೆ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಬಾಬು ನಾಯ್ಕೆ ಸ್ಥಳದಲ್ಲೇ ಮೃತಪಟ್ಟರು.
ಚಾಲಕ ಅಂಬ್ಯುಲೆನ್ಸ್‌ನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.