ದಲಿತ ಅನಾಥ ಬಾಲಕಿ ಗರ್ಭಿಣಿ ಪ್ರಕರಣ: ಮೂವರ ಬಂಧನ
Update: 2017-04-02 22:09 IST
ಬೆಳ್ತಂಗಡಿ, ಎ.2: ದಲಿತ ಸಮುದಾಯದ ಅನಾಥ ಬಾಲಕಿಯನ್ನು ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೊಪಿಗಳನ್ನು ಧರ್ಮಸ್ಥಳ ಪೋಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕಳೆಂಜ ಗ್ರಾಮದ ನಿವಾಸಿಗಳಾಗಿರುವ ಆದಿ ಯಾನೆ ಆದಿತ್ಯ, ಕರುಣಾಕರಗೌಡ, ಹಾಗೂ ಕರಾಯ ನಿವಾಸಿಯಾಗಿರುವ ಯಶೊಧರ ಎಂಬವರಾಗಿದ್ದಾರೆ.
ಪೋಲೀಸ್ ವಶದಲ್ಲಿದ್ದ ಆರೊಪಿಗಳನ್ನು ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿ ಗುರುತಿಸಿರುವುದಾಗಿ ತಿಳಿದು ಬಂದಿದೆ. ಈಕೆ ಇನ್ನೂ ಕೆಲವರ ಹೆಸರನ್ನು ಹೇಳಿರುವುದಾಗಿ ತಿಳಿದು ಬಂದಿದ್ದು ಇವರನ್ನು ಬಂಧಿಸುವತ್ತ ಪೋಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಆರೋಪಿಗಳ ವಿರುದ್ದ ದಲಿತ ದೌರ್ಜನ್ಯ ಹಾಗು ಪೋಸ್ಕೋ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಟ್ವಾಲ ಡಿವೈಎಸ್‌ಪಿ ರವೀಶ್ ಸಿ ಆರ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೋಲೀಸರು ಪ್ರಕರಣದ ತನಿಖೆ ನಡೆಸಿತ್ತಿದ್ದಾರೆ.