×
Ad

ಮರ್ಧಾಳ ಪ್ರವಾಸಿಗಳ ಒಕ್ಕೂಟ NIYF ಅಂತಾರಾಷ್ಟ್ರೀಯ ಸಂಘ ಅಸ್ಥಿತ್ವಕ್ಕೆ

Update: 2017-04-02 23:37 IST

ಕಡಬ, ಎ.2: ತಕ್ವೀಯತ್ತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿ ಕಳೆದ 16 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನುಸ್ರತ್ತುಲ್ ಇಸ್ಲಾಂ ಯೂತ್ ಫೆಡರೇಶನ್ ಇದರ ಸದಸ್ಯರಾಗಿದ್ದುಕೊಂಡು ಸೌದಿ ಅರೇಬಿಯಾ, ದುಬೈ, ಕತ್ತರ್, ಮಸ್ಕತ್, ಕುವೈಟ್, ಬಹರೈನ್ ನಂತಹ ಗಲ್ಫ್‌ ರಾಷ್ಟ್ರಗಳಲ್ಲಿ ಪ್ರವಾಸಿ ಜೀವನ ಸಾಗಿಸುತ್ತಿರುವ ಮರ್ಧಾಳ ಜಮಾಅತಿಗೊಳಪಟ್ಟ ಯುವ ಜನತೆಯ ಅಂತಾರಾಷ್ಟ್ರೀಯ ಒಕ್ಕೂಟವನ್ನು ಹಬೀಬ್ ಮುಸ್ಲಿಯಾರ್ ನಿಂತಿಕಲ್ಲುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಸ್ಥಿತ್ವಕ್ಕೆ ತರಲಾಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಪಾಲೆತ್ತಡ್ಕ, ಅಧ್ಯಕ್ಷರನ್ನಾಗಿ ಸಲಾಂ ಮರ್ಧಾಳ, ಉಪಾಧ್ಯಕ್ಷರಾಗಿ ನಿಸಾರ್ ಖಾನ್, ಅಲಿ ಚಾಕಟೆಕೆರೆ, ಪ್ರಧಾನ ಕಾರ್ಯದರ್ಶಿ ಹೈದರ್ ಮರ್ಧಾಳ, ಜತೆ ಕಾರ್ಯದರ್ಶಿ ಅಶ್ರಫ್ ಮರ್ಧಾಳ, ಶರಫುದ್ದೀನ್, ಕೋಶಾಧಿಕಾರಿಯಾಗಿ ಅಶ್ರಫ್ ಕೊಡೆಂಕೀರಿ, ಲೆಕ್ಕ ಪರಿಶೋಧಕರಾಗಿ ಸಂಶುದ್ದೀನ್ ಪಾಲೆತ್ತಡ್ಕ, ಸಾಂತ್ವನ ವಿಭಾಗದ ಮುಖ್ಯಸ್ಥರನ್ನಾಗಿ ಜಾಫರ್ ಶರೀಫ್ ಮಿತ್ತೋಡಿ, ಸಂಚಾಲಕರಾಗಿ ಹನೀಸ್ ಎಂ. ಕೊಹಿನೂರ್, ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಹಬೀಬ್ ಮುಸ್ಲಿಯಾರ್, ಸಂಚಾಲಕರಾಗಿ ಶಾಹಿರ್ ಖಾನ್ ಪೆರ್ಲ, ಸಂಘಟನಾ ವಿಭಾಗದ ಮುಖ್ಯಸ್ಥರಾಗಿ ಹೈದರ್ ಪಾಲೆತ್ತಡ್ಕ, ಸಂಚಾಲಕರಾಗಿ ಕಬೀರ್, ಸಂಘದ ಪ್ರಧಾನ ಸಲಹೆಗಾರರಾಗಿ ಉಮ್ಮರ್ ಸಖಾಫಿ ಕಂಬಳಬೆಟ್ಟು, ಸಲಹಾ ಸಮಿತಿಯ ಪದಾಧಿಕಾರಿಗಳಾಗಿ ಅಬ್ದುಲ್ ಖಾದರ್ ಕೆನರಾ, ತಲ್ಹತ್ ಮಿತ್ತೋಡಿ, ಹನೀಪ್ ಖಾನ್ ಹಾಗೂ ಮಹಮ್ಮದ್ ಸಿ.ಕೆ. ರವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News