×
Ad

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕಿರುಕುಳ ತಪಿ್ಪಸಲು ಮನವಿ

Update: 2017-04-02 23:59 IST

ಮಂಗಳೂರು, ಎ.2: ಕೊಲ್ಲಿ ರಾಷ್ಟ್ರವಾದ ಕತರ್‌ಗೆ ಭೇಟಿ ನೀಡಿದ ರಾಜ್ಯ ಸರಕಾರದ ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಕತರ್‌ನ ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ನಿಯೋಗವು ಇತ್ತೀಚೆಗೆ ಕತರ್ ದೇಶದ ಮೇರಿಯೋಟ್ ಪಂಚತಾರಾ ಹೊಟೇಲ್‌ನಲ್ಲಿ ಭೆೇಟಿ ಮಾಡಿತು.

ನಿಯೋಗದಲ್ಲಿದ್ದ ಕೆಸಿಎಫ್ ಪದಾಧಿಕಾರಿಗಳು ಮಂಗಳೂರಿನ ಬಜ್ಪೆಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ತಪಾಸಣೆಯ ನೆಪದಲ್ಲಿ ಪ್ರಯಾಣಿಕರಿಗೆ ನೀಡುತ್ತಿರುವ ಮಾನಸಿಕ ಕಿರುಕುಳದ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿಷಯವನ್ನು ಕೇಂದ್ರ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರಲ್ಲದೆ, ವಿಮಾನ ನಿಲ್ದಾಣದ ಸಿಬ್ಬಂದಿ ವರ್ಗದಿಂದ ಉಂಟಾಗುತ್ತಿರುವ ಅನನುಕೂಲತೆ ಮತ್ತು ಅನ್ಯಾಯವನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಪ್ರಯಾಣಿಕರಿಗಾಗುತ್ತಿರುವ ಕಿರುಕುಳವನ್ನು ಸರಿಪಡಿಸಲು ಶ್ರಮಿಸುವುದಾಗಿ ತಿಳಿಸಿದರು.

ನಿಯೋಗದಲ್ಲಿ ಕೆಸಿಎಫ್ ಅಧ್ಯಕ್ಷ ಹಾಫಿಲ್ ಉಮರುಲ್ ಫಾರೂಕ್ ಸಖಾಫಿ, ಪ್ರ.ಕಾರ್ಯದರ್ಶಿ ರಹೀಂ ಸಅದಿ ಪಾಣೆಮಂಗಳೂರು, ಸಂಘಟನಾಧ್ಯಕ್ಷ ಯೂಸುಫ್ ಸಖಾಫಿ ಅಯ್ಯಂಗೇರಿ, ಸಮಾಜ ಸೇವಕ ಮತ್ತು ಕೆಎಂಸಿಎ ಅಧ್ಯಕ್ಷ ಅಬ್ದುಲ್ಲಾ ಮೋನು ಮಂಗಳೂರು, ಕೆಸಿಎಫ್ ಪದಾಧಿಕಾರಿಗಳಾದ ಅಬ್ದುಲ್ ಸತ್ತಾರ್ ಅಶ್ರಫಿ ಮಠ, ಮಿರ್ಶಾದ್ ಕನ್ಯಾನ, ಹನೀಫ್ ಪಾತೂರು, ಫಾರೂಕ್ ಕೃಷ್ಣಾಪುರ, ಸಿದ್ದೀಕ್ ಕೃಷ್ಣಾಪುರ, ಮುನೀರ್ ಮಾಗುಂಡಿ, ರಝಾಕ್ ಮುಂಕೂರು, ಸಿದ್ದೀಕ್ ಹಂಡುಗುಳಿ ಉಪಸ್ಥಿತರಿದ್ದರು ಎಂದು ಕಿರುಗುಂದ ಇಬ್ರಾಹೀಂ ದೋಹ, ಕತರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News