×
Ad

ಮೇಲ್ತೆನೆಯಿಂದ ಬ್ಯಾರಿ ಸಾಹಿತ್ಯ ಸಂವಾದ ಕೂಟ

Update: 2017-04-03 00:00 IST

ಮಂಗಳೂರು, ಎ.2: ಬ್ಯಾರಿ ಕಲಾವಿದರು ಮತ್ತು ಬರಹಗಾರರ ಒಕ್ಕೂಟವಾಗಿರುವ ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಉಪಾಧ್ಯಕ್ಷ ಇಸ್ಮತ್ ಫಜೀರ್‌ರ ಕಚೇರಿಯಲ್ಲಿ ‘ಬ್ಯಾರಿ ಸಾಹಿತ್ಯ ಸಂವಾದ ಕೂಟ’ ಇತ್ತೀಚೆಗೆ ನಡೆಯಿತು.

ಮೇಲ್ತೆನೆ ಅಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಇಸ್ಮತ್ ಫಜೀರ್ ಮಂಡಿಸಿದ ‘ಬ್ಯಾರಿ ಭಾಷೆಯ ಪ್ರಭೇದಗಳು’ ಎಂಬ ಪ್ರಬಂಧದ ಮೇಲೆ ಚರ್ಚೆ ನಡೆಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾದ ಆರಿಫ್ ಕಲ್ಕಟ್ಟ, ಬಶೀರ್ ಅಹ್ಮದ್ ಕಿನ್ಯ, ಪ್ರೊ.ನಿಯಾಝ್ ಚರ್ಚೆಯಲ್ಲಿ ಪಾಲ್ಗೊಂಡರು. ಜತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News