ಮಂಗಳೂರು: ದಲಿತ ಸಂಘಟನೆಯ ಸಾಧಕರಿಗೆ ಸನ್ಮಾನ
Update: 2017-04-03 00:03 IST
ಮಂಗಳೂರು,ಎ.2: ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ದಲಿತ ಸಮಾಜದ ಸಾಧಕರಾದ ಎಂ. ದೇವದಾಸ್, ಕೇಶವ, ಜೆ. ಉತ್ತಮ್ ಕುಮಾರ್, ಡಿ. ವಿನಯ ನೇತ್ರ,ರಾಜ ಪಲ್ಲಮಜಲು ಅವರನ್ನು ಸಚಿವ ಯು.ಟಿ.ಖಾದರ್ ಸನ್ಮಾನಿಸಿದರು.
ಸಮಾಜ ಸೇವೆಗಾಗಿ ಆಯ್ಕೆಯಾದ ಅಖಿಲ ಭಾರತ ಮುಂಡಾಲ ಯುವ ವೇದಿಕೆ ಮಂಗಳೂರು ಮತ್ತು ಮೂಡುಬಿದಿರೆಯ ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘಕ್ಕೆ ತಲಾ 10,000 ರೂ. ನಗದು ಬಹುಮಾನ ನೀಡಿದರು.
ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಪಾಲಿಕೆಯ ಸಚೇತಕ ಶಶಿಧರ್ ಹೆಗ್ಡೆ, ಸಾಮಾಜಿಕ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ನಾಗವೇಣಿ, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಉಪಸ್ಥಿತರಿದ್ದರು.