×
Ad

ಎಸ್‌ಬಿಐಯೊಂದಿಗೆ ಎಸ್‌ಬಿಎಂ ಶಾಖೆಗಳ ವಿಲೀನ: ಮಂಗಳೂರಿನಲ್ಲೂ ಪ್ರಕ್ರಿಯೆ ಆರಂಭ

Update: 2017-04-03 00:08 IST

ಮಂಗಳೂರು, ಎ.2: ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ ಉಗಮ ಸ್ಥಾನವಾದ ಕರಾವಳಿಯಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗಳು ಸ್ಟೇಟ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನ ಪ್ರಕ್ರಿಯೆ ಚುರುಕುಗೊಂಡಿದೆ.

ಶತಮಾನದ ಹಿಂದಿನ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ಮಂಗಳೂರಿ ನಲ್ಲೂ ಎಂಟು ಶಾಖೆಗಳನ್ನು ಹೊಂದಿದೆ. ಇಲ್ಲಿನ ಹೆಚ್ಚಿನ ಎಸ್‌ಬಿಎಂ ಶಾಖೆಗಳು ಹೆಸರು ಬದಲಾವಣೆಯೊಂದಿಗೆ ಆಯಾ ಪ್ರದೇಶದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ ಎಂದು ಬ್ಯಾಂಕಿನ ಪ್ರತಿನಿಧಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಇದರಿಂದ ಗ್ರಾಹಕರಿಗೆ ತೊಂದರೆಯಾಗುವುದಿಲ್ಲ. ಸದ್ಯದ ಬ್ಯಾಂಕ್ ನಿಯಮಾವಳಿ ಪ್ರಕಾರ 500 ಮೀಟರ್ ವ್ಯಾಪ್ತಿಯೊಳಗೆ ಬ್ಯಾಂಕಿನ ಇನ್ನೊಂದು ಶಾಖೆ ಕಾರ್ಯ ನಿರ್ವಹಿಸುವ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ 500 ಮೀಟರ್ ವ್ಯಾಪ್ತಿಯೊಳಗೆ ಕಾರ್ಯ ನಿರ್ವಹಿಸುತ್ತಿರುವ ಎಸ್‌ಬಿಎಂ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಯಿದೆ.

ಮಂಗಳೂರಿನ ಪಂಪ್‌ವೆಲ್ ಮಹಾವೀರ ವೃತ್ತದ ಬಳಿ ಇರುವ ಎಸ್‌ಬಿಎಂ ಶಾಖೆ, ತೊಕ್ಕೊಟ್ಟು ಶಾಖೆ, ಚಿಲಿಂಬಿಯ ಶಾಖೆ, ಕದ್ರಿಯ ಶಾಖೆಗಳು ಹೆಸರು ಬದಲಾವಣೆಯೊಂದಿಗೆ ಯಥಾಸ್ಥಳದಲ್ಲೇ ಮುಂದು ವರಿಯುವ ಸಾಧ್ಯತೆ ಇದೆ. ಆದರೆ ವೆಲೆನ್ಸಿಯಾದಲ್ಲಿ ಎಸ್‌ಬಿಐ ಮತ್ತು ಎಸ್‌ಬಿಎಂ ಶಾಖೆಗಳು 500 ಮೀಟರ್ ವ್ಯಾಪ್ತಿಯೊಳಗೆ ಇರುವುದರಿಂದ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇದುವರೆಗೆ ಅಧಿ ಕೃತ ಆದೇಶ ಬಂದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News