ಬರದಿಂದ ಪಾರಾಗಲು ಜಲ ಸಂರಕ್ಷಣೆಯೇ ಪರಿಹಾರ: ಅಭಯಚಂದ್ರ

Update: 2017-04-02 18:40 GMT

ಮೂಡುಬಿದಿರೆ, ಎ.2: ಮಂಗಳೂರ ು ತಾಲೂಕನ್ನು ಸರಕಾರ ಬರಪೀಡಿತ ಎಂದು ಘೋಷಿಸಿದೆ. ಇದರಿಂದ ಹೊರ ಬರುವತ್ತ ನಾವು ಕಾರ್ಯನಿರತರಾಗಬೇಕು. ಇದಕ್ಕೆ ಜಲ ಸಂರಕ್ಷಣೆ ಯೊಂದೇ ಪರಿಹಾರ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.

ಇಲ್ಲಿನ ಸಮಾಜ ಮಂದಿರ ಸಭಾದ ಸ್ವರ್ಣ ಮಂದಿರದಲ್ಲಿ ಕಂದಾಯ ಇಲಾಖೆ, ಪುರಸಭೆ ಹಾಗೂ ಮೂಡು ಬಿದಿರೆ ಜಲಸಂರಕ್ಷಣೆ ಸಮಿತಿಯ ಸಹಯೋಗದಲ್ಲಿ ರವಿವಾರ ನಡೆದ ಜಲ ಸಂರಕ್ಷಣೆ ಮತ್ತು ಅಂತರ್ಜಲ ಅಭಿವೃದ್ಧಿ ಕಾರ್ಯಾಗಾರ ಮತ್ತು ಸಮಾಲೋಚನಾ ಸಭೆಯನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.

ಅಂತರ್ಜಲದ ಅಭಿವೃದ್ಧಿಗಾಗಿ ಸರಕಾರವು ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರಕ್ಕೆ 1.30 ಕೋ.ರೂ. ಅನುದಾನ ನೀಡಿದೆ. ಸರಕಾರದ ಸಹಾ ಯಧನದ ಮೂಲಕ ಈಗಾಗಲೇ 3 ಕೆರೆಗಳ ಹೂಳೆತ್ತುವ ಕೆಲಸ ಆಗಿದೆ. ಕಿಂಡಿ ಅಣೆಕಟ್ಟುಗಳ ಪುನಶ್ಚೇತನಕ್ಕೆ 8.30 ಕೋ.ರೂ., ಪುತ್ತಿಗೆ ಅರ್ಬಿ ಅಣೆಕಟ್ಟು ಅಭಿವೃದ್ಧಿಗೆ 1.50 ಕೋ.ರೂ. ಮಂಜೂರಾತಿ, ಕೆರೆ ಸಂಜೀವಿನಿ ಯೋಜನೆಯ ಮೂಲಕ ಪುತ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ 30 ಲಕ್ಷ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿಯನ್ನು ಮಾಡಲಾಗುವುದು ಎಂದವರು ತಿಳಿ ಸಿದರು.

ಪುರಸಭಾ ಸದಸ್ಯ ಪಿ.ಕೆ. ಥೋಮಸ್, ಜಲ ಸಂರಕ್ಷಣೆ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ತೆಂಕಮಿಜಾರು ಗ್ರಾಪಂ ಪಿಡಿಒ ಸಾಯೀಶ ಚೌಟ, ಹಿರಿಯ ಕೃಷಿಕ ಡಾ. ಎಲ್.ಸಿ.ಸೋನ್ಸ್, ರೋಟರಿ ಕ್ಲಬ್‌ನ ಡಾ.ಮುರಳೀಕೃಷ್ಣ, ಬೆಳುವಾಯಿ ಗ್ರಾಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ಜಲ ಕ್ಷಾಮವನ್ನು ತಡೆಯಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ತಾಪಂ ಸದಸ್ಯರಾದ ಪ್ರಶಾಂತ್, ಸುಕುಮಾರ್ ಸನಿಲ್, ನಾಗವೇಣಿ, ರೇಖಾ ಸಾಲ್ಯಾನ್, ವನಿತಾ ನಾಯ್ಕಾ, ಸಂತೋಷ್, ಪಡುಮಾರ್ನಾಡು ಗ್ರಾಪಂ ಅಧ್ಯಕ್ಷ ಶ್ರೀನಾಥ್, ತೆಂಕಮಿಜಾರು ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಹೊಸಬೆಟ್ಟು ಗ್ರಾಪಂ ಅಧ್ಯಕ್ಷ ಮನೋಜ್ ಆಲ್ವಾರಿಸ್, ವಾಲ್ಪಾಡಿ ಗ್ರಾಪಂ ಅಧ್ಯಕ್ಷೆ ವಸಂತಿ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾನಂದ, ರೋಟರಿ ಅಧ್ಯಕ್ಷ ಮುಹಮ್ಮದ್ ಶರೀಫ್, ಲಯನ್ಸ್ ಅಧ್ಯಕ್ಷ ರುಕ್ಮಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್ ಸ್ವಾಗತಿಸಿದರು. ಪುರಸಭಾ ಕಂದಾಯ ಅಧಿಕಾರಿ ಧನಂಜಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News