×
Ad

​ಪಲ್ಸ್ ಪೋಲಿಯೊಗೆ ಚಾಲನೆ

Update: 2017-04-03 00:11 IST

ಮಂಗಳೂರು, ಎ.2: ರಾಷ್ಟ್ರೀಯ ಪಲ್ಸ್ ಪೋಲಿಯೊದ ಮೊದಲ ಹಂತದ ಜಿಲ್ಲಾ ಮಟ್ಟದ ಲಸಿಕೆ ಕಾರ್ಯಕ್ರಮಕ್ಕೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ರವಿವಾರ ಶಾಸಕ ಜೆ.ಆರ್.ಲೋಬೊ ಚಾಲನೆ ನೀಡಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಜಿಪಂ ಸಿಇಒ ಡಾ.ಎಂ.ಆರ್.ರವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಆರ್‌ಸಿಎಚ್ ಅಧಿಕಾರಿ ಡಾ. ಅಶೋಕ್ ಉಪಸ್ಥಿತರಿದ್ದರು.

*ಶೇ.85.98: ದ.ಕ. ಜಿಲ್ಲ್ಲಾದ್ಯಂತ ನಡೆದ ಲಸಿಕೆ ಕಾರ್ಯಕ್ರಮದಲ್ಲಿ ಶೇ.85.92 ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಗ್ರಾಮಾಂತರದ 5 ವರ್ಷದೊಳಗಿನ 1,14,540 ಹಾಗೂ ನಗರದ 50,425 ಸಹಿತ 1,64,965 ಮಕ್ಕಳಿದ್ದು, ಆ ಪೈಕಿ 1,41,842 ಮಕ್ಕಳಿಗೆ ರವಿವಾರ ಲಸಿಕೆ ಹಾಕಲಾಗಿದೆ. ಸುಮಾರು 921 ಬೂತ್‌ಗಳ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮ ಏಕಕಾಲದಲ್ಲಿ ನಡೆಯಿತು. ಜನಸಂದಣಿ ಇರುವ ಜಾಗದಲ್ಲಿ ಲಸಿಕೆ ಹಾಕಲು 27 ಟ್ರಾನ್ಸಿಟ್ ತಂಡ ಹಾಗೂ 9 ಸಂಚಾರಿ ತಂಡವನ್ನು ರಚಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News