×
Ad

ಶ್ರೀನಗರ ವಿಮಾನನಿಲ್ದಾಣದಲ್ಲಿ ಭಾರತದ ಸೈನಿಕನ ಬಂಧನ

Update: 2017-04-03 10:22 IST

  ಶ್ರೀನಗರ,ಎ.3: ಎರಡು ಸಜೀವ ಗ್ರೆನೆಡ್ ಸಾಗಿಸುತ್ತಿದ್ದ ಭಾರತದ ಸೈನಿಕನೊಬ್ಬನನ್ನು ್ನಸೋಮವಾರ ಬೆಳಗ್ಗೆ ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಆ್ಯಂಟಿ-ಹೈಜಾಕ್ ತಂಡ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಯೋಧ ಭೂಪಾಲ್ ಮುಖಿಯ ಅವರು ಜಮ್ಮು-ಕಾಶ್ಮೀರ ರೈಫಲ್ಸ್‌ನಲ್ಲಿ ಜಮ್ಮು-ಕಾಶ್ಮೀರದ ಯೂರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ದಿಲ್ಲಿಗೆ ವಿಮಾನದ ಮೂಲಕ ಪ್ರಯಾಣಿಸಲು ಸಜ್ಜಾಗುತ್ತಿದ್ದಾಗ ಅವರ ಬ್ಯಾಗ್ ತಪಾಸಣೆಯ ವೇಳೆ 2 ಸಜೀವ ಗ್ರೆನೆಡ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಗ್ರಾಮದ ನದಿಯಲ್ಲಿ ಗ್ರೆನೆಡ್ ಸ್ಫೋಟಿಸಿ ಮೀನು ಹಿಡಿಯಲು ಬಯಸಿದ್ದೆ. ಹೀಗಾಗಿ ಗ್ರೆನೆಡ್ ಸಾಗಿಸುತ್ತಿದ್ದೆ ಎಂದು ಪೊಲೀಸರ ವಿಚಾರಣೆಯ ವೇಳೆ ಸೈನಿಕ ಹೇಳಿದ್ದಾರೆ.
ಬಂಧಿತ ಸೈನಿಕ ಡಾರ್ಜಿಲಿಂಗ್‌ನ ಬಸೋಲಿ ಗ್ರಾಮದ ನಿವಾಸಿಯಾಗಿದ್ದಾರೆೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News