ವಾಲ್ಮೀಕಿಗೆ ಅವಮಾನ ಮಾಡಿದ ರಾಖಿ ಸಾವಂತ್ ವಿರುದ್ಧ ಬಂಧನ ವಾರಂಟ್
Update: 2017-04-03 13:04 IST
ಲುಧಿಯಾನ, ಎ.3: ಹಿಂದೂಗಳ ಪವಿತ್ರ ರಾಮಾಯಣದ ಕೃತಿಕರ್ತ ವಾಲ್ಮೀಕಿ ಋಷಿಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಇಲ್ಲಿನ ನ್ಯಾಯಾಲಯವೊಂದು ಬಂಧನ ವಾರಂಟ್ ಹೊರಡಿಸಿದೆ.
ಖಾಸಗಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಖಿ ಈ ಸಂದರ್ಭ ವಾಲ್ಮೀಕಿ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸುವಂತಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಆವರ ವಿರುದ್ಧ ದೂರು ನೀಡಲಾಗಿತ್ತು.
ಲುಧಿಯಾನ ಪೊಲೀಸರ ಎರಡು ಮಂದಿ ತಂಡ ಈಗಾಗಲೇ ಮುಂಬೈಗೆ ಬಂಧನ ವಾರಂಟ್ ನೊಂದಿಗೆ ತೆರಳಿದೆ. ಈ ಪ್ರಕರಣ ಸಂಬಂಧ ಮಾರ್ಚ್ 9ರಂದು ನಡೆದ ನ್ಯಾಯಾಲಯದ ವಿಚಾರಣೆಗೆ ರಾಖಿ ಹಲವಾರು ಸಮ್ಮನ್ಸ್ ಗಳ ಹೊರತಾಗಿಯೂ ಹಾಜರಾಗದೇ ಇರುವುದರಿಂದ ಈಗ ಬಂಧನ ವಾರಂಟ್ ಜಾರಿಯಾಗಿದೆ.
ಈ ಪ್ರಕರಣದ ಮುಂದಿನ ವಿಚಾರಣೆ ಎಪ್ರಿಲ್ 10ಕ್ಕೆ ನಿಗದಿಯಾಗಿದೆ.