ಬಾಂಗ್ಲಾದೇಶದಲ್ಲಿ ಬ್ಲಾಗರ್ ಕೊಲೆ: ಗಲ್ಲುಶಿಕ್ಷೆ ಖಾಯಂ
Update: 2017-04-03 16:28 IST
ಢಾಕ,ಎ.3: 2013ರಲ್ಲಿ ಬ್ಲಾಗರ್ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ವಿಚಾರಣಾ ಕೋರ್ಟು ವಿಧಿಸಿದ್ದ ಮರಣ ದಂಡನೆಯನ್ನು ಬಾಂಗ್ಲಾದೇಶದ ಉನ್ನತ ಕೋರ್ಟು ಖಾಯಂಗೊಳಿಸಿದೆ.
ನಿಷೇಧಿತ ಅನ್ಸಾರುಲ್ಲ ಬಾಂಗ್ಲ ಟೀಂ ಎನ್ನುವ ಸಂಘಟನೆಯ ಇಬ್ಬರು ಕಾರ್ಯಕರ್ತರಿಗೆ ಬಾಂಗ್ಲಾ ವಿಚಾರಣಾ ಕೋರ್ಟು ಬ್ಲಾಗರ್ ಹತ್ಯೆ ಆರೋಪದಲ್ಲಿ ಮರಣದಂಡನೆ ವಿಧಿಸಿ ತೀರ್ಪಿತ್ತಿತ್ತು. ಬಾಂಗ್ಲಾ ಉನ್ನತ ಕೋರ್ಟು ಈ ತೀರ್ಪನ್ನು ಪುರಸ್ಕರಿಸಿ ಮರಣದಂಡನೆ ಖಾಯಂಗೊಳಿಸಿದೆ. ಕಳೆದವರ್ಷ ಬಾಂಗ್ಲಾದಲ್ಲಿ ಹಲವಾರು ಬ್ಲಾಗರ್‌ಗಳ ವಿರುದ್ಧ ದಾಳಿಗಳು ನಡೆದಿವೆ. ಮರಣದಂಡನೆಗೆ ಗುರಿಯಾದವರನ್ನು ರಿಝ್ವಾನುಲ್ ಅಸದ್‌ರಾಣ, ಫೈಝಲ್ ಬಿನ್ ನಈಂ ಇವರು ವಿಶ್ವವಿದ್ಯಾನಿಲಯವೊಂದರ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ.