×
Ad

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಉಚಿತ ಮೊಬೈಲ್ ಟೆಕ್ನಿಕಲ್ ಕೋರ್ಸಿಗೆ ಅರ್ಜಿ ಆಹ್ವಾನ

Update: 2017-04-03 17:07 IST

ಮಂಗಳೂರು, ಎ.3: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಿರುದ್ಯೋಗಿ ಯುವಕರಿಗೆ ಮತ್ತು ಮದ್ರಸ ಅದ್ಯಾಪಕರಿಗೆ ಉಚಿತ ಮೊಬೈಲ್ ಟೆಕ್ನಿಕಲ್ ತರಬೇತಿಯನ್ನು ನೀಡುವ ಸಲುವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ತರಬೇತಿಯ ಕಾಲಾವಧಿ 4 ತಿಂಗಳು. ಕನಿಷ್ಟ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪಾಸ್/ಫೈಲ್. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07.04.2017. ನಮ್ಮ ಸಂಸ್ಥೆಯ ವತಿಯಿಂದ ಈಗಾಗಲೇ 24 ಬ್ಯಾಚ್‌ಗಳಲ್ಲಿ ಸಾವಿರಾರು ಯುವಕರು ಮೊಬೈಲ್ ತರಬೇತಿಯನ್ನು ಪಡೆದಿದ್ದು, ಇದೀಗ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದೀಗ ಮೊಬೈಲ್ ತರಬೇತಿ ಪಡೆದವರಿಗೆ ಬಹಳಷ್ಟು ಬೇಡಿಕೆಯಿದ್ದು, ಉತ್ತಮ ಸಂಪಾದನೆಗೊಂದು ದಾರಿಯಾಗಿದೆ. ಅಲ್ಲದೆ ಸ್ವಂತ ಅಂಗಡಿಗಳನ್ನು ತೆರೆದು ಸ್ವ ಉದ್ಯೋಗಕ್ಕೂ ಬಹಳಷ್ಟು ಅವಕಾಶವಿದೆ. ಆದುದರಿಂದ ನಿರುದ್ಯೋಗಿ ಯುವಕರು ಮತ್ತು ಮದ್ರಸ ಅದ್ಯಾಪಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಬೇಕಾಗಿ ಸಂಸ್ಥೆಯ ತರಬೇತುದಾರ ಅಬ್ದುಲ್ ಮಜೀದ್ ತುಂಬೆ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2. ದೂರವಾಣಿ-0824-4267883, 9449883171

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News