×
Ad

ನವ ಮಂಗಳೂರು ಬಂದರಿನಿಂದ ದಾಖಲೆ ಸರಕು ನಿರ್ವಹಣೆ !

Update: 2017-04-03 18:31 IST

ಮಂಗಳೂರು, ಎ.3: ನವ ಮಂಗಳೂರು ಬಂದರು ಮಂಡಳಿಯು 2016-17ನೆ ಸಾಲಿನ ಆರ್ಥಿಕ ವರ್ಷದಲ್ಲಿ ಹಡಗುಗಳ ಮೂಲಕ 39.94 ಮಿಲಿಯ ಟನ್‌ಗಳ ದಾಖಲೆ ಪ್ರಮಾಣದ ಸರಕು ನಿರ್ವಹಣೆಯನ್ನು ಮಾಡಿದೆ. ಈ ಮೂಲಕ 2013-14ನೆ ಸಾಲಿನ 39.36 ಮಿಲಿಯ ಟನ್ ಸರಕು ನಿರ್ವಹಣೆಯ ದಾಖಲೆಯನ್ನು ಮುರಿದಿದೆ. 

ಹಿಂದಿನ ಆರ್ಥಿಕ ಸಾಲಿನಲ್ಲಿ 35.58 ಮಿಲಿಯ ಟನ್‌ಗಳ ಸರಕು ನಿರ್ವಹಣೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಚಿವಾಲಯವು ನಿಗದಿಪಡಿಸಿದ್ದ 38 ಮಿಲಿಯ ಟನ್‌ಗಳ ಸರಕು ನಿರ್ವಹಣೆಗೆ ಪ್ರತಿಯಾಗಿ ಶೇ. 5.11ರಷ್ಟು ಹೆಚ್ಚುವರಿ ನಿರ್ವಹಣೆಯನ್ನು ತೋರಿದೆ. ಈ ಹೆಚ್ಚುವರಿ ಸರಕು ನಿರ್ವಹಣೆಯಲ್ಲಿ ಎಂಆರ್‌ಪಿಎಲ್‌ಗೆ ಕಚ್ಚಾ ತೈಲ, ಯುಪಿಸಿಎಲ್‌ಗೆ ಕಲ್ಲಿದಲು, ಕೆಐಒಸಿಎಲ್‌ಗೆ ಕಬ್ಬಿಣದ ಅದಿರು ಹಾಗೂ ಎಲ್‌ಪಿಜಿ ಸೇರಿದೆ ಎಂದು ಎನ್‌ಎಂಪಿಟಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News