×
Ad

ಲಾಮಾ ಸಶಸ್ತ್ರ ಬಂಡಾಯದ ಬಳಿಕ ಭಾರತಕ್ಕೆ ಓಡಿದವರು : ಚೀನಾ

Update: 2017-04-03 21:43 IST

ಬೀಜಿಂಗ್, ಎ. 3: 1959ರಲ್ಲಿ ವಿಫಲ ಸಶಸ್ತ್ರ ಕ್ರಾಂತಿಯ ಬಳಿಕ ದಲಾಯಿ ಲಾಮಾ ಟಿಬೆಟ್‌ನಿಂದ ಭಾರತಕ್ಕೆ ಪಲಾಯನ ಮಾಡಿದರು ಎಂದು ಚೀನಾ ಹೇಳಿದೆ.
ಚೀನಾದ ಹೆಚ್ಚುತ್ತಿದ್ದ ಸೇನಾ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬೇರೆ ದಾರಿಯಿಲ್ಲದೆ ಟಿಬೆಟ್‌ನಿಂದ ಪಲಾಯನಗೈಯಬೇಕಾಯಿತು ಎಂಬ ಲಾಮಾರ ಹೇಳಿಕೆಯನ್ನು ಅದು ತಳ್ಳಿಹಾಕಿದೆ.

‘‘ಎಲ್ಲರಿಗೂ ಗೊತ್ತಿರುವಂತೆ, 14ನೆ ದಲಾಯಿ ಲಾಮಾ ಚೀನಾ ವಿರೋಧಿ ಪ್ರತ್ಯೇಕತಾವಾದಿಯಾಗಿದ್ದಾರೆ. ಟಿಬೆಟ್‌ನ ಉನ್ನತ ಸ್ತರದ ಊಳಿಗ್ಯಮಾನ ದೊರೆಗಳ ಪ್ರತಿಗಾಮಿ ಗುಂಪು 1959ರ ಮಾರ್ಚ್‌ನಲ್ಲಿ ನಡೆಸಿದ ಸಶಸ್ತ್ರ ಬಂಡಾಯ ವಿಫಲಗೊಂಡ ಬಳಿಕ ಅವರು ಸುದೀರ್ಘ ಕಾಲ ದೇಶಭ್ರಷ್ಟ ಜೀವನ ನಡೆಸಿದ್ದಾರೆ’’ ಎಂದು ಚೀನಾದ ವಿದೇಶ ಸಚಿವಾಲಯ ರವಿವಾರ ಪಿಟಿಐಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಚೀನಾ ವಿರೋಧಿ ಪ್ರತ್ಯೇಕತಾವಾದಿ ಉದ್ದೇಶವನ್ನು ಬಿಂಬಿಸುವ ಅವರ ಹೇಳಿಕೆಗಳಲ್ಲಿ ಸತ್ಯದ ಲವಲೇಶವೂ ಇಲ್ಲ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News