×
Ad

ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸುವ ಹಕ್ಕು ಪೋಲಿಸರಿಗಿಲ್ಲ: ಮಾನವ ಹಕ್ಕು ಸಂಸ್ಥೆ

Update: 2017-04-05 10:47 IST

ಮಂಗಳೂರು,ಎ.5: ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೂರ್ವಾಗ್ರಹ ಪೀಡಿತ ಲಾಠಿಚಾರ್ಜ್ ಖಂಡನೀಯ. ಸರಕಾರ ಕೂಡಲೇ ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಅನ್ಯಾಯವೆಸಗಿದ ಪೋಲಿಸರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕು ಸಂಸ್ಥೆ  ಜಿಲ್ಲಾದ್ಯಕ್ಷ ತಾಹಿರ್ ಸಾಲ್ಮರ ಆಗ್ರಹಿಸಿದರು.

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಟಿ ಬೀಸುವ ಹಕ್ಕು ಪೋಲಿಸರಿಗಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೋಲೆ ಹಾಗೂ ಮಾನವ ಹಕ್ಕು ಉಲ್ಲಂಘನೆಯಾಗಿದೆ, ಈ ಬಗ್ಗೆ ರಾಜ್ಯಾದ್ಯಕ್ಷ ಡಾ. ಮೋಹನ್ ರಾವ್ ನಾಲ್ವಡೆಯವರು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ನಾಳೆ ದೂರು ನೀಡಲಿದ್ದಾರೆ ಎಂದು ತಾಹಿರ್ ಪ್ರಕಟನೆಯಲ್ಲಿ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News