×
Ad

ಕೋಸ್ಟಲ್‌ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟ್ರೋಫಿ ಅನಾವರಣ

Update: 2017-04-05 17:11 IST

ಮಂಗಳೂರು, ಎ.5: ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಟ್ರೋಫಿ ಅನಾವರಣ ಮಂಗಳವಾರ ಪಾಂಡೇಶ್ವರದ ಫಾರಂ ಫಿಝಾ ಮಾಲ್‌ನಲ್ಲಿ ನಡೆಯಿತು.

 ಮುಂಗಾರು ಮಳೆ ಖ್ಯಾತಿಯ ಗಣೇಶ್‌ರವರು ಸಿಪಿಎಲ್ ಪಂದ್ಯಕೂಟದ ಆಕರ್ಷಕ ಟ್ರೋಫಿಯನ್ನು ಅನಾವರಣ ಮಾಡಿದರು. ಕರಾವಳಿಯ ಚಿತ್ರರಂಗದ ಕೋಸ್ಟಲ್‌ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯು ನಗರದ ನೆಹರೂ ಮೈದಾನದಲಿ ಎಪ್ರಿಲ್ 11 ರಿಂದ 15ರವರೆಗೆ ಸುರಕ್ಷಾ ಕೋಸ್ಟಲ್‌ವುಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಕೂಟವನ್ನು ನಡೆಸಲಿದೆ.

ಭಾಗವಹಿಸುವ ಎಂಟು ತಂಡಗಳಲ್ಲಿ ಒಂದಾದ ಜುಗಾರಿ ವಾರಿಯರ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವರವರು ದೀಪ ಬೆಳಗಿಸಿದರು.

ಈ ಸಂದರ್ಭ ಅವರು ಮಾತನಾಡಿ, ಪಂದ್ಯಕೂಟದ ತುಳು ಭಾಷೆಗೆ ಎರಡು ಸಾವಿರ ವರುಷಗಳ ಇತಿಹಾಸವಿದೆ. ತುಳು ನಾಟಕ ರಂಗಕ್ಕೆ ನೂರಾರು ವರುಷಗಳ ಇತಿಹಾಸವಿದೆ. ತುಳು ಚಿತ್ರರಂಗವು ನಲವತ್ತು ವರುಷಗಳ ಇತಿಹಾಸದೊಂದಿಗೆ ಬೆಳೆದು ಬಂದು ಇದೀಗ ಇತರೆಲ್ಲಾ ಭಾಷೆಯ ಚಿತ್ರರಂಗಕ್ಕೆ ಸಮಾನಾಂತರವಾಗಿ ನಿಂತಿರುವುದು ಸಂತಸದ ಸಂಗತಿ ಎಂದರು. ಎಲ್ಲ ರಂಗದಲ್ಲೂ ಒಗ್ಗಟ್ಟಿದ್ದರೆ ಪ್ರಗತಿ ಸಾಧ್ಯ, ಅಂತಹ ಒಗ್ಗಟ್ಟು ಈ ಸಿಪಿಎಲ್ ಪಂದ್ಯಕೂಟದ ಮೂಲಕ ತುಳು ಚಿತ್ರರಂಗಕ್ಕೆ ಒದಗಿ ಬರಲಿ ಎಂದು ಹಾರೈಸಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸದಾನಂದ ಶೆಟ್ಟಿಯವರು ಈ ಪಂದ್ಯಕೂಟದ ಮೂಲಕ ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ಮೂಡಿ ಬರಲಿ ಎಂದರು.

 ಈ ಸಂದರ್ಭದಲ್ಲಿ ಪಂದ್ಯಕೂಟದ ಥೀಮ್ ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಪಂದ್ಯಕೂಟವನ್ನು ನಮ್ಮ ದೇಶವನ್ನು ಕಾಯುವ ಸೈಕರಿಗೆ ಅರ್ಪಣೆ ಮಾಡುವುದಾಗಿ ಘೋಷಿಸಲಾಯಿತು. ದೈಹಿಕ ಸಾಮರ್ಥ್ಯವನ್ನು ನೀಡುವ ಝೂಂಬಾ ನೃತ್ಯವನ್ನು ಈ ಸಂದರ್ಭದಲ್ಲಿ ಪರಿಚಯಿಸಲಾಯಿತು.
  
ಪಂದ್ಯಾಟದಲ್ಲಿ ಭಾಗವಹಿಸುವ ಎಂಟು ತಂಡಗಳ ಆಟಗಾರರ ಉಡುಪನ್ನು ಬಿಡುಗಡೆ ಮಾಡಲಾಯಿತು. 11ರಿಂದ ನೆಹರೂ ಮೈದಾನದಲ್ಲಿ ಪಂದ್ಯಗಳು
ಬ್ರಾಂಡ್ ವಿಷನ್ ಕಾರ್ಯಕ್ರಮ ರ್ವಹಣಾ ಸಂಸ್ಥೆಯ ರ್ವಹಣೆಯಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಂಜೆಯವರೆಗೆ ಪಂದ್ಯಗಳು ಜರಗಲಿವೆ. ಎಪ್ರಿಲ್ 11ರಂದು ಅದ್ದೂರಿಯ ಆರಂಭದೊಂದಿಗೆ ಎಪ್ರಿಲ್ 13ರವರೆಗೆ ಲೀಗ್ ಹಂತದ ಪಂದ್ಯಗಳು ಜರಗಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News