×
Ad

ಹೊಲಕ್ಕೆ ಬಂದ ಆಡುಗಳನ್ನು ಓಡಿಸಿದಕ್ಕೆ ಮನೆಗೆ ನುಗ್ಗಿ ಕೃಷಿಕ ಕುಟುಂಬಕ್ಕೆ ಹಲ್ಲೆ

Update: 2017-04-05 23:00 IST

ಉಳ್ಳಾಲ, ಎ.5: ಕೃಷಿಕ ಕುಟುಂಬಕ್ಕೆ ಹಲ್ಲೆ ಮಾಡಿದ ಘಟನೆ ತಲಪಾಡಿ ಕಿನ್ಯಾ ಬೆಳರಿಂಗೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಪುಷ್ಪಾವತಿ(53)ಗಂಡ ಜನಾರ್ಧನ್(60)ಮಗ ಅಜಿತ್(23) ಎಂದು ತಿಳಿದುಬಂದಿದೆ.

ಹಮೀದ್ ಅವರಿಗೆ ಸೇರಿದ ಆಡುಗಳು ತಮ್ಮ  ಹೊಲಕ್ಕೆನುಗ್ಗಿದ್ದನ್ನು ಕಂಡು ಪುಷ್ಪ ಅವುಗಳನ್ನು ಓಡಿಸಿದ್ದಾರೆ. ಇದರಿಂದ ಕುಪಿತಗೊಂಡ ಹಮೀದ್ ಪುತ್ರ ಫತಾಕ್ ಮತ್ತು ಸಹಚರರು ಹಲ್ಲೆ ನಡೆಸಿದ್ದಾರೆ. ಮನೆಗೆ ನುಗ್ಗಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳುಗಳು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News